ಪೂರ್ವ ಭಾರತದಲ್ಲಿ ವರುಣ ಕೃಪೆ ತೋರಿಲ್ಲ. ಬಿಸಿಲ ಧಗೆಗೆ ಜನರು ಬೇಸತ್ತು ಹೋಗಿದ್ದಾರೆ. ಕೃಷಿ ಕಾರ್ಯ ನೀರಿಲ್ಲದೆ ನಿಂತಿದೆ. ಮಳೆಯಿಲ್ಲದೆ ಬರ ಆವರಿಸಿದೆ. ವರುಣ ದೇವನನ್ನು ಒಲಿಸಿಕೊಳ್ಳಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ಬೆತ್ತಲಾಗಿ ಹೊಲ ಉಳಲು ಮುಂದಾಗಿದ್ದಾರೆ.
ಬಿಹಾರದ ಕೆಲ ಜಿಲ್ಲೆಗಳಲ್ಲಿ ಸೂರ್ಯಾಸ್ತದ ನಂತ್ರ ಹುಡುಗಿಯರು ಬೆತ್ತಲಾಗಿ ಹೊಲವನ್ನೂಳುತ್ತಿದ್ದಾರೆ. ಪ್ರಾಚೀನ ಶ್ಲೋಕಗಳನ್ನು ಪಠಣ ಮಾಡ್ತಿದ್ದಾರೆ. ಹೀಗೆ ಮಾಡುವುದರಿಂದ ದೇವರು ನಾಚಿಕೊಳ್ತಾನೆ. ಅನಿವಾರ್ಯವಾಗಿ ಮಳೆ ಸುರಿಸ್ತಾನೆಂಬ ನಂಬಿಕೆ ಅಲ್ಲಿನವರದ್ದು.
ಹಿಂದಿನಿಂದಲೂ ಈ ಪದ್ಧತಿ ಜಾರಿಯಲ್ಲಿದೆ. ಮಳೆಗಾಗಿ ಜನರು ಈ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಕೃಷಿಗೆ ಅವಶ್ಯವಿರುವಷ್ಟು ಮಳೆ ಬೀಳುವವರೆಗೆ ಈ ಪದ್ಧತಿ ಮುಂದುವರೆಸುವುದಾಗಿ ಇಲ್ಲಿನ ಜನರು ಶಪಥ ಮಾಡಿದ್ದಾರೆ. ಭಾರತದಲ್ಲಿ ಈ ಬಾರಿ ಮುಂಗಾರು ತಡವಾಗಿ ಆಗಮಿಸಿದೆ. ಜೊತೆಗೆ ಅನೇಕ ರಾಜ್ಯಗಳು ಇನ್ನೂ ಮಳೆಯನ್ನು ನೋಡಿಲ್ಲ. ಇದರಿಂದಾಗಿ ಬರ ಆವರಿಸಿದೆ.