ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದ್ಯಾವರನ ಹಳ್ಳಿಯ ದುರ್ಗಮ್ಮನ ಹಳ್ಳದ ರಸ್ತೆ ತಿರುವಿನಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 4 ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.
ಶಶಿಧರ್ ಎಂಬ 35 ವರ್ಷದ ಯುವಕ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಟ್ಯಾಕ್ಸಿ ಚಲಾಯಿಸಿ ಜೀವನ ಸಾಗಿಸುತ್ತಿದ್ದು, ಕೆಲವು ದಿನಗಳ ಹಿಂದೆ ತಮ್ಮ ಊರಿಗೆ ಬಂದಿದ್ದರು. ಕುಟುಂಬದವರೆಲ್ಲಾ ಸೇರಿ ಕೂಡ್ಲಿಗಿ ತಾಲ್ಲೂಕಿನ ಗಾಣಿಗಟ್ಟಿಯ ಮಾಯಮ್ಮ ದೇವಿ ದರ್ಶನ ಪಡೆಯಲು ಕಾರಿನಲ್ಲಿ ಮಂಗಳವಾರ ಹೊರಟಿದ್ದರು.
ಆದರೆ ದೇವರ ದರ್ಶನ ಮಾಡುವ ಮೊದಲೇ ಬಾರದ ಲೋಕಕ್ಕೆ ತೆರಳಿದ್ದಾರೆ, ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿ ಶಶಿಧರ, ಈರಕ್ಕ (55) , ಕರಿಯಣ್ಣ (50), ಮಂಜುಳ (30) ಮೃತಪಟ್ಟಿದ್ದಾರೆ. ಯಶೋಧಮ್ಮ (50) ಶಾರದಮ್ಮ (25) ಗಾಯಗೊಂಡಿದ್ದು, ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.