ಕ್ರಿಕೆಟ್ ಹಾಗೂ ಬಾಲಿವುಡ್ ಬಹು ಚರ್ಚಿತ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಮುನಿಸಿಕೊಂಡು ಮತ್ತೆ ಒಂದಾಗಿರುವ ಜೋಡಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಟೆಸ್ಟ್ ಪಂದ್ಯಕ್ಕಾಗಿ ಕೊಹ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾರೆ. ‘ಸುಲ್ತಾನ್’ ಚಿತ್ರದ ಪ್ರಮೋಷನ್ ನಲ್ಲಿ ಅನುಷ್ಕಾ ಬ್ಯುಸಿಯಿದ್ದಾಳೆ.
ಬ್ಯುಸಿ ಲೈಫ್ ನಲ್ಲಿಯೂ ಪ್ರೀತಿಗೆ ಇಬ್ಬರೂ ಜಾಗ ನೀಡಿದ್ದಾರೆ. ಬೆಂಗಳೂರಿನಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಕೊಹ್ಲಿ ಭೇಟಿಗೆ ಅನುಷ್ಕಾ ಬಂದಿದ್ದಳು ಎನ್ನಲಾಗ್ತಾ ಇದೆ. ಮುಂಬೈನಿಂದ ತವರೂರು ಬೆಂಗಳೂರಿಗೆ ಬಂದಿದ್ದ ಅನುಷ್ಕಾ, ಕೊಹ್ಲಿ ಜೊತೆ ಕೆಲ ಸಮಯ ಕಳೆದಿದ್ದಾಳೆ ಎಂದು ಮೂಲಗಳು ಹೇಳ್ತಾ ಇವೆ.
ಆದ್ರೆ ಈ ಸುದ್ದಿಯನ್ನು ಅನುಷ್ಕಾ ಆಪ್ತರು ತಳ್ಳಿ ಹಾಕಿದ್ದಾರೆ. ಅನುಷ್ಕಾ ಬೆಂಗಳೂರಿಗೆ ಬಂದಿದ್ದಳು ಎನ್ನುವುದು ಸುಳ್ಳು ಸುದ್ದಿ. ಆರೋಗ್ಯ ಸಮಸ್ಯೆಯಿದ್ದರೂ ಅನುಷ್ಕಾ ‘ಸುಲ್ತಾನ್’ ಪ್ರಮೋಷನ್ ನಲ್ಲಿ ಬ್ಯುಸಿಯಿದ್ದಾಳೆ. ಮುಂಬೈನಲ್ಲಿಯೇ ಚಿತ್ರ ಪ್ರಚಾರ ಮಾಡ್ತಿದ್ದಾಳೆ ಎಂದಿದ್ದಾರೆ.