ಕೊಪ್ಪಳ: ಪತಿ, ಪತ್ನಿ ನಡುವಿನ ಜಗಳ ಉಂಡು ಮಲಗುವ ತನಕ ಎಂಬ ಮಾತೆಲ್ಲಾ ಹಳೆಯದಾಗಿದ್ದು, ಈಗೇನಿದ್ದರೂ, ದಂಪತಿ ನಡುವೆ ಜಗಳ ನಿರಂತರವಾಗಿ ನಡೆಯುತ್ತದೆ. ಕ್ಷುಲ್ಲಕ ಕಾರಣಗಳಿಗೆ ಜಗಳವಾಡುವ ದಂಪತಿ ದೂರವಾಗಿ ಬಿಡುತ್ತಾರೆ.
ಇಲ್ಲೊಬ್ಬ ಮಹಿಳೆ, ಗಂಡ ಸರ್ಕಾರಿ ನೌಕರಿ ಹೊಂದಿಲ್ಲ ಎಂಬ ಕಾರಣಕ್ಕೆ ದೂರವಾಗಿದ್ದಾಳೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಯುವಕ ಹಾಗೂ ಯುವತಿ ಪ್ರೀತಿಸಿದ್ದು, ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಮದುವೆಯಾದ ದಂಪತಿಗೆ 7 ತಿಂಗಳ ಮಗುವಿದ್ದು, ಇವರ ನಡುವೆ ಸಣ್ಣ ವಿಷಯಕ್ಕೆ ಜಗಳವಾಗಿ ಪತ್ನಿ ತವರು ಮನೆ ಸೇರಿಕೊಂಡಿದ್ದಾಳೆ. ನಿನಗೆ ಸರ್ಕಾರಿ ಕೆಲಸ ಸಿಕ್ಕರೆ ಮಾತ್ರ ಜೊತೆಗೆ ಬರುತ್ತೇನೆ. ಇಲ್ಲವಾದರೆ, ಬರುವುದಿಲ್ಲ ಎಂದು ಹೇಳಿದ್ದಾಳೆನ್ನಲಾಗಿದೆ.
ಇದರಿಂದ ಕಂಗಾಲಾದ ಪತಿ, ಸರ್ಕಾರಿ ನೌಕರಿ ಸೇರಲು ಪ್ರಯತ್ನಿಸಿದ್ದರೂ, ಅದು ಕೈಗೂಡಿಲ್ಲ. ಕೊನೆಗೆ ಪತಿ, ಪತ್ನಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ಆರಂಭವಾದ ಸಣ್ಣ ಜಗಳ ಈ ಹಂತಕ್ಕೆ ಬಂದು ನಿಂತಿದೆ ಎನ್ನಲಾಗಿದೆ.