ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಸಚಿವ ಸಂಪುಟವನ್ನು ಪುನಾರಚಿಸಿದ್ದು, 19 ಮಂದಿ ಹೊಸ ಮುಖಗಳಿಗೆ ಮನ್ನಣೆ ನೀಡಿದ್ದಾರೆ. ಸಂಪುಟದಲ್ಲಿದ್ದ ಪ್ರಕಾಶ್ ಜಾವಡೇಕರ್ ಅವರಿಗೆ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಲಾಗಿದ್ದು, ಉಳಿದೆಲ್ಲರೂ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಉತ್ತರ ಪ್ರದೇಶ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಸಂಸದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಚಿವರನ್ನಾಗಿಸುವ ಮೂಲಕ ಮತ ಸೆಳೆಯುವ ಪ್ರಯತ್ನ ನಡೆಸಿದೆ. ಉತ್ತರ ಪ್ರದೇಶ, ಗುಜರಾತ್ ಹಾಗೂ ಮಧ್ಯ ಪ್ರದೇಶದ ಹಲವು ಮಂದಿಗೆ ನೂತನ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ಇಂದು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದವರ ವಿವರ ಇಂತಿದೆ. ವಿಜಯ್ ಗೋಯೆಲ್, ಫಗ್ಗನ್ ಕುಲಸ್ತೆ, ಅಜಯ್ ತಮ್ಟಾ, ಅರ್ಜುನ್ ರಾಮ್ ಮೆಗ್ವಾಲ್, ಕೃಷ್ಣ ರಾಜ್, ರಾಮದಾಸ್ ಅತಾವಳೆ, ರಮೇಶ್ ಜಿಗಜಿಣಗಿ, ಅನುಪ್ರಿಯಾ ಪಟೇಲ್, ಎಸ್.ಎಸ್. ಅಹ್ಲುವಾಲಿಯ, ಪಿ.ಪಿ. ಚೌಧರಿ, ಸಿ.ಆರ್. ಚೌಧರಿ, ಎಂ.ಜೆ. ಅಕ್ಬರ್, ಜೆ. ಭಬೋರ್, ಪುರುಷೋತ್ತಮ್ ರೂಪಾಲ, ಮನುಸುಖ್ ಭಾಯ್ ಮಾಂಡವೀಯ, ಎಸ್.ಆರ್. ಬಾಮ್ರೆ, ಮಹೇಂದ್ರನಾಥ್ ಪಾಂಡೆ, ಎ.ಎಂ. ದವೆ ಮತ್ತು ರಾಜೇನ್ ಗುಹೆನ್.