ನಮಗಿಷ್ಟವಾಗುವ ಬಣ್ಣ, ಡಿಸೈನ್ ಬಟ್ಟೆಗಳನ್ನು ನಾವು ಖರೀದಿ ಮಾಡ್ತೇವೆ. ಮನೆಗೆ ಬಂದು ಅದನ್ನು ಮೂರ್ನಾಲ್ಕು ಬಾರಿ ಹಾಕಿ ನೋಡ್ತೇವೆ. ಅಂಗಡಿಯಿಂದ ತಂದ ಬಟ್ಟೆ ಚೆನ್ನಾಗಿದೆಯಾ? ನಮಗೆ ಈ ಬಣ್ಣ ಸರಿ ಬರುತ್ತಾ? ಹೀಗೆ ಅಂಗಡಿಯಿಂದ ತಂದ ಹೊಸ ಬಟ್ಟೆಗಳನ್ನು ಹಾಕಿ ನೋಡುವುದು ಎಲ್ಲರ ಅಭ್ಯಾಸ. ಇದು ಗೊತ್ತಿರುವ ವಿಚಾರ. ಇದನ್ನು ಮತ್ತೆ ಯಾಕೆ ಹೇಳ್ತಿದ್ದೀರಾ ಎಂಬ ನಿಮ್ಮ ಪ್ರಶ್ನೆಗೆ ಆಶ್ಚರ್ಯವಾಗುವಂತಹ ಉತ್ತರವೊಂದಿದೆ.
ಶಾನನ್ ಬ್ರೌನ್ ಎಂಬ ಮಹಿಳೆ, ಅಂಗಡಿಯಲ್ಲಿ ನೈಟ್ ಡ್ರೆಸ್ ಖರೀದಿಸಿದ್ದಾಳೆ. ಅಂಗಡಿಯಲ್ಲಿ ಬಟ್ಟೆ ತುಂಬಾ ಮುದ್ದಾಗಿ ಕಂಡಿದೆ. ಬೇಸಿಗೆಯಲ್ಲಿ ಇದು ಸೂಕ್ತ ಎಂದುಕೊಂಡ ಶಾನನ್ ಬ್ರೌನ್, ಈ ಡ್ರೆಸ್ ಖರೀದಿಸಿ ಮನೆಗೆ ತಂದಿದ್ದಾಳೆ. ಮನೆಗೆ ಬಂದು ಮತ್ತೊಮ್ಮೆ ಡ್ರೆಸ್ ನೋಡಿದಾಗ ಆಕೆಗೆ ಆಶ್ಚರ್ಯವಾಗಿದೆ.
ಬಟ್ಟೆಯ ಮೇಲಿದ್ದಿದ್ದು ಸುಂದರ ಡಿಸೈನ್ ಗಳಲ್ಲ. ಬದಲಾಗಿ ಸೆಕ್ಸ್ ಚಿತ್ರಗಳು. ತಕ್ಷಣ ಈ ಡ್ರೆಸ್ ಮೇಲಿದ್ದ ಚಿತ್ರಗಳ ಫೋಟೋ ತೆಗೆದು ಶಾನನ್ ಟ್ವಿಟರ್ ಗೆ ಅಪ್ ಲೋಡ್ ಮಾಡಿದ್ದಾಳೆ. ಜೊತೆಗೆ ತನ್ನ ಸ್ಥಿತಿಯನ್ನು ವಿವರಿಸಿದ್ದಾಳೆ. ಶಾನನ್ ಳ ಈ ಪೋಸ್ಟನ್ನು 7000 ಬಾರಿ ಶೇರ್ ಮಾಡಲಾಗಿದೆ.