ಲಂಡನ್: ವಿಂಬಲ್ಡನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಗ್ರ್ಯಾನ್ ಸ್ಲಾಮ್ ವಿಭಾಗದಲ್ಲಿ 300 ಪಂದ್ಯಗಳನ್ನು ಗೆದ್ದ ಕೀರ್ತಿಗೆ ಪಾತ್ರವಾಗಿದ್ದಾರೆ. ವಿಂಬಲ್ಡನ್ ಟೂರ್ನಿಯಲ್ಲಿ ಜರ್ಮನಿಯ ಆನಿಕಾ ಬೆಕ್ ವಿರುದ್ಧ ಜಯಗಳಿಸಿ ಈ ಶ್ರೇಯಕ್ಕೆ ಸೆರೆನಾ ಪಾತ್ರವಾದರು.
ವೃತ್ತಿ ಜೀವನದಲ್ಲಿ 21 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗಳಿಸಿರುವ ಸೆರೆನಾ 22ನೇ ಪ್ರಶಸ್ತಿ ಗಳಿಸುವತ್ತ ದಾಪುಗಾಲಿಟ್ಟಿದ್ದಾರೆ. ವಿಶ್ವದ ನಂಬರ್ ಒನ್ ಆಟಗಾರ್ತಿಯಾಗಿರುವ ಸೆರೆನಾ 43ನೇ ಶ್ರೇಯಾಂಕ ಹೊಂದಿರುವ ಜರ್ಮನಿಯ ಆನಿಕಾ ಬೆಕ್ ಅವರನ್ನು 6-3, 6-0 ಸೆಟ್ ಗಳಿಂದ ಮಣಿಸಿದರು. ಈ ಮೂಲಕ ವೃತ್ತಿ ಜೀವನದಲ್ಲಿ ಗ್ರ್ಯಾನ್ ಸ್ಲಾಮ್ ನಲ್ಲಿ 300ನೇ ಜಯ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಜರ್ಮನಿಯ ಸ್ಟೆಫಿಗ್ರಾಫ್ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದು, ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಸೆರೆನಾ ಹೆಜ್ಜೆ ಇಟ್ಟಿದ್ದಾರೆ.
ಸ್ಟೆಪಿಗ್ರಾಫ್ 377 ಪಂದ್ಯಗಳನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ನಲ್ಲಿ ದಾಖಲೆ ಬರೆದಿದ್ದಾರೆ. ನಂತರದಲ್ಲಿ ಮಾರ್ಟಿನಾ ನವಾಟ್ರಿಲೊವಾ ಇದ್ದು, ಅದೇ ಹಾದಿಯಲ್ಲಿ ಸೆರೆನಾ ವಿಲಿಯಮ್ಸ್ ಸಾಗುತ್ತಿದ್ದಾರೆ. ಅವರು ವಿಂಬಲ್ಡನ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.