ಶಾಲೆಯಲ್ಲಿ ವ್ಯವಸ್ಥಾಪಕನೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯೊಂದರಲ್ಲಿ ವ್ಯವಸ್ಥಾಪಕನಾಗಿರುವ ಜಿತೇಂದ್ರ ಕುಮಾರ್ ಅತ್ಯಾಚಾರ ಎಸಗಿದ ಆರೋಪಿ.
ಜಿತೇಂದ್ರ ಕುಮಾರ್ ಶಾಲೆಯಲ್ಲಿ ಓದುತ್ತಿದ್ದ 15 ವರ್ಷ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ, ಅದನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ಈ ಘಟನೆ ನಡೆದು 1 ವರ್ಷವಾಗಿದ್ದು, ಬಾಲಕಿಗೆ ಬೆದರಿಕೆ ಹಾಕಿದ್ದರಿಂದ ಆಕೆ ಭಯಗೊಂಡು ವಿಷಯವನ್ನು ಮುಚ್ಚಿಟ್ಟಿದ್ದಾಳೆ. ನಂತರದಲ್ಲಿ ಜಿತೇಂದ್ರ ಕುಮಾರ್ ತನ್ನ ಮೊಬೈಲ್ ನಲ್ಲಿದ್ದ ವಿಡಿಯೋ ತೋರಿಸಿ ಬಾಲಕಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದನಾದರೂ, ಆಕೆ ರೆಸ್ಪಾನ್ಸ್ ಮಾಡಿಲ್ಲ. ಆಕಸ್ಮಿಕವಾಗಿ ಆತನ ಮೊಬೈಲ್ ನಿಂದ ವಿಡಿಯೋ ಬೇರೆಯವರಿಗೆ ಸೆಂಡ್ ಆಗಿದೆ.
ಹೀಗೆ ಸೆಂಡ್ ಆದ ವಿಡಿಯೋ ವೈರಲ್ ಆಗಿದ್ದು, ಬಳಿಕ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಗುರುವಾರ ಕೊತ್ವಾಲಿ ಬಗ್ವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅತ್ಯಾಚಾರ ಎಸಗಿದ್ದ ಶಾಲೆಯ ವ್ಯವಸ್ಥಾಪಕ ಜಿತೇಂದ್ರ ಕುಮಾರ್ ನನ್ನು ಬಂಧಿಸಿದ್ದಾರೆ.