ಟ್ಯೂಷನ್ ಮುಗಿಸಿಕೊಂಡು ಸ್ನೇಹಿತರೊಂದಿಗೆ ಮನೆಗೆ ತೆರಳುತ್ತಿದ್ದ 9 ನೇ ತರಗತಿ ವಿದ್ಯಾರ್ಥಿಯೊಬ್ಬ ಪಾನ್ ಶಾಪ್ ಅಂಗಡಿಯವನಿಗೆ ತಮಾಷೆ ಮಾಡಿದ್ದೇ ದುರಂತಕ್ಕೆ ಕಾರಣವಾಗಿದೆ. ಕೋಪಗೊಂಡ ಪಾನ್ ಶಾಪ್ ಮಾಲೀಕ ಸಾಯುವಂತೆ ವಿದ್ಯಾರ್ಥಿಗೆ ಹೊಡೆದಿದ್ದಾನೆ.
ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಜತ್ ಮೆನನ್ ಎಂಬ ವಿದ್ಯಾರ್ಥಿ ತನ್ನ ಸ್ನೇಹಿತರ ಜೊತೆ ಟ್ಯೂಷನ್ ಮುಗಿಸಿಕೊಂಡು ಬರುವಾಗ ದಾರಿಯಲ್ಲಿದ್ದ ಪಾನ್ ಶಾಪ್ ಅಂಗಡಿ ಮಾಲೀಕನ ಜೊತೆ ಸಣ್ಣ ವಿಚಾರಕ್ಕೆ ವಾಗ್ವಾದಕ್ಕೆ ಇಳಿದಿದ್ದಾನೆ.
ಇದರಿಂದ ಆಕ್ರೋಶಗೊಂಡ ಪಾನ್ ಶಾಪ್ ಮಾಲೀಕ ಮತ್ತವನ ಮಕ್ಕಳು ಹಲ್ಲೆಗೆ ಮುಂದಾಗಿದ್ದು, ರಜತ್ ಮೆನನ್ ಸ್ನೇಹಿತರು ತಪ್ಪಿಸಿಕೊಂಡು ಹೋಗಿದ್ದಾರೆ. ತಮ್ಮ ಕೈಗೆ ಸಿಕ್ಕ ರಜತ್ ಮೆನನ್ ಅನ್ನು ಪ್ರಜ್ಞೆ ತಪ್ಪುವಂತೆ ಥಳಿಸಿದ ಬಳಿಕ ಆರೋಪಿಗಳೇ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದು, ಇದೀಗ ಪಾನ್ ಶಾಪ್ ಮಾಲೀಕ ಮತ್ತವನ ಮಕ್ಕಳ ವಿರುದ್ದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.