ಬೀಜಿಂಗ್: ಬಸ್ ನಲ್ಲಿ ಪ್ರಯಾಣಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಮೈಮರೆತರೆ ಮುಗಿದೇ ಹೋಯ್ತು. ನಿಮ್ಮ ಹಣ, ಲಗೇಜ್ ಕ್ಷಣಾರ್ಧದಲ್ಲಿ ಮಾಯವಾಗಿರುತ್ತದೆ. ಇತ್ತೀಚೆಗಂತೂ ಬಸ್ ಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿಬಿಟ್ಟಿದೆ.
ಹೀಗೆ ಬಸ್ ನಲ್ಲಿ ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವತಿಯೊಬ್ಬಳ ಪರ್ಸ್ ನಲ್ಲಿದ್ದ ಹಣ ಕದಿಯಲು ಮುಂದಾದ ಕಳ್ಳನಿಗೆ ಏನಾಯ್ತು ಎಂಬುದನ್ನು ನೀವೇ ನೋಡಿ. ಚೀನಾದಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಮೊಬೈಲ್ ನಲ್ಲಿ ಚಾಟ್ ಮಾಡುತ್ತಿರುವುದನ್ನು ಗಮನಿಸಿದ ಕಳ್ಳ, ಆಕೆಯ ಸಮೀಪಕ್ಕೆ ಬಂದಿದ್ದಾನೆ. ಆಕೆಯ ಪರ್ಸ್ ನಲ್ಲಿದ್ದ ಹಣ ಎಗರಿಸಿದ್ದಾನೆ. ಇದು ಗಮನಕ್ಕೆ ಬಂದಿದ್ದೇ ತಡ, ಯುವತಿ ಅವನನ್ನು ಥಳಿಸಿದ್ದಾಳೆ.
ಕಳ್ಳನ ಕೈಹಿಡಿದು, ಕಾಲಿನಿಂದ ಸರಿಯಾಗಿ ಜಾಡಿಸಿದ್ದಾಳೆ. ಈಕೆಯ ಏಟಿಗೆ ಕಳ್ಳ ಬೇಸ್ತು ಬಿದ್ದಿದ್ದಾನೆ. ಅಲ್ಲಿದ್ದವರ್ಯಾರೋ ಇದನ್ನೆಲ್ಲಾ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದನ್ನು ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.