Quantcast
Channel: Latest News | Kannada Dunia | Kannada News | Karnataka News | India News
Viewing all 90268 articles
Browse latest View live

ಈ ಸೇಲ್ ನಲ್ಲಿ ಶೇ.100 ಕ್ಯಾಶ್ಬ್ಯಾಕ್ ಪಡೆಯುವ ಅವಕಾಶ ನೀಡ್ತಿದೆ ಫ್ಲಿಪ್ಕಾರ್ಟ್

$
0
0

ಮೊಬೈಲ್ ಅಥವಾ ಮನೆಯ ಯಾವುದೇ ಎಲೆಕ್ಟ್ರಿಕ್ ಸಾಮಗ್ರಿಯನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ ಸ್ವಲ್ಪ ತಡೆಯಿರಿ. ಶೀಘ್ರದಲ್ಲಿಯೇ ಫ್ಲಿಪ್ಕಾರ್ಟ್ ಮೆಗಾ ಸೇಲ್ ಶುರು ಮಾಡ್ತಿದೆ. ಬಿಗ್ ಶಾಪಿಂಗ್ ಡೇ ಸೇಲ್ ನಾಲ್ಕು ದಿನ ನಡೆಯಲಿದೆ. ಮೇ.13ರಿಂದ ಮೇ.16ರವರೆಗೆ ಈ ಸೇಲ್ ಇರಲಿದೆ.

ಈ ಸೇಲ್ ನಲ್ಲಿ ಮೊಬೈಲ್, ಎಲೆಕ್ಟ್ರಿಕಲ್ ವಸ್ತು ಸೇರಿದಂತೆ ಎಲ್ಲ ವಸ್ತುಗಳ ಮೇಲೆ ಬಾರಿ ರಿಯಾಯಿತಿ ನೀಡುವುದಾಗಿ ಫ್ಲಿಪ್ಕಾರ್ಟ್ ಹೇಳಿದೆ. ಫ್ಲಿಪ್ಕಾರ್ಟ್ ಇಎಂಐ ಆಫರನ್ನೂ ಗ್ರಾಹಕರಿಗೆ ನೀಡ್ತಿದೆ. ಗ್ರಾಹಕರು ಡೆಬಿಟ್ ಕಾರ್ಡ್ ನಲ್ಲಿ ಹಣ ಪಾವತಿಸುವುದಾದ್ರೆ EMI ಅಥವಾ Buy now & Pay later ಆಯ್ಕೆಯ ಲಾಭ ಪಡೆಯಬಹುದಾಗಿದೆ.

ಈ ಸೇಲ್ ನಲ್ಲಿ ಲ್ಯಾಪ್ಟಾಪ್, ಕ್ಯಾಮರಾ, ಪವರ್ ಬ್ಯಾಂಕ್, ಟ್ಯಾಬ್ಲೆಟ್ ಮೇಲೆ ಶೇಕಡಾ 80ರಷ್ಟು ರಿಯಾಯಿತಿ ಸಿಗ್ತಿದೆ. ಟಿವಿ ಸೇರಿದಂತೆ ಕೆಲ ವಸ್ತುಗಳ ಫ್ಲಾಶ್ ಸೇಲ್ ನಡೆಯಲಿದೆ. ಬಿಗ್ ಶಾಪಿಂಗ್ ಡೇ ನಲ್ಲಿ ಮೊಬೈಲ್ ಖರೀದಿ ಮಾಡುವ ಗ್ರಾಹಕರಿಗೆ ಫ್ಲಿಪ್ಕಾರ್ಟ್ ಭರ್ಜರಿ ಕೊಡುಗೆ ನೀಡ್ತಿದೆ. ಅತಿ ಕಡಿಮೆ ಬೆಲೆಗೆ ಕೆಲ ಮಾಡೆಲ್ ಫೋನ್ ಗಳು ಗ್ರಾಹಕರಿಗೆ ಸಿಗಲಿದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ.

ಈ ಬಾರಿ ಫ್ಲಿಪ್ಕಾರ್ಟ್ ಗೇಮ್ಸ್ ಕಾರ್ನರ್ ಕೂಡ ಶುರು ಮಾಡ್ತಿದೆ. ಗೇಮ್ಸ್ ಕಾರ್ನರ್ ನಲ್ಲಿ ಗೆದ್ದ ಗ್ರಾಹಕರಿಗೆ ಕೇವಲ 1 ರೂಪಾಯಿಯಲ್ಲಿ ಲ್ಯಾಪ್ಟಾಪ್, ಮೊಬೈಲ್ ಖರೀದಿ ಮಾಡುವ ಅವಕಾಶ ಸಿಗಲಿದೆ. ಇದ್ರ ಜೊತೆಗೆ ಶೇಕಡಾ 100ರಷ್ಟು ಕ್ಯಾಶ್ಬ್ಯಾಕ್ ಪಡೆಯುವ ಅವಕಾಶವೂ ಸಿಗ್ತಿದೆ.

 


ಮಕ್ಕಳ ಜೊತೆ ಪ್ರಯಾಣ ಬೆಳೆಸುವ ವೇಳೆ ಬ್ಯಾಗ್ ನಲ್ಲಿರಲಿ ಈ ವಸ್ತು

$
0
0

ಮಕ್ಕಳಿಗೆ ಈಗಾಗಲೇ ರಜಾ ಶುರುವಾಗಿದೆ. ರಜೆಯಲ್ಲಿ ಮಕ್ಕಳೊಂದಿಗೆ ಪಾಲಕರು ಪ್ರವಾಸಕ್ಕೆ ಹೋಗೋದು ಸಾಮಾನ್ಯ. ಮಕ್ಕಳ ಜೊತೆ ಮನೆ ಬಿಡೋದು ಪಾಲಕರಿಗೆ ತಲೆ ನೋವಿನ ಕೆಲಸ. ಮಕ್ಕಳು ಚಿಕ್ಕವರಿರಲಿ ಇಲ್ಲ ದೊಡ್ಡವರಾಗಿರಲಿ, ಸಣ್ಣ ಸಣ್ಣ ವಿಚಾರಕ್ಕೆ ಕಿರಿಕಿರಿ ಮಾಡ್ತಿರುತ್ತಾರೆ. ಅದ್ರಲ್ಲೂ ತಿಂಡಿ ವಿಚಾರದಲ್ಲಿ ಗಲಾಟೆ ಮಾಮೂಲಿ. ಹೊರಗಿನ ತಿಂಡಿ ಮಕ್ಕಳಿಗೆ ಬೇಕು. ಆರೋಗ್ಯದ ತಿಂಡಿ ತಿನ್ನಿಸಲು ಪಾಲಕರು ಬಯಸ್ತಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗುವುದುಂಟು.

ಮಕ್ಕಳ ಜೊತೆ ಪ್ರವಾಸಕ್ಕೆ ಹೋಗುವ ಮೊದಲು ಕೆಲವೊಂದು ವಸ್ತುಗಳು ಅವಶ್ಯವಾಗಿ ನಿಮ್ಮ ಬ್ಯಾಗ್ ನಲ್ಲಿರಬೇಕು. ಅದ್ರಲ್ಲೂ ತಿಂಡಿ ವಿಚಾರದಲ್ಲಿ ಹೆಚ್ಚು ಜಾಗೃತರಾಗಿರಬೇಕು. ಮನೆಬಿಡುವ ಮೊದಲು ಅವಶ್ಯವಾಗಿ ಕೆಲವೊಂದು ತಿಂಡಿಗಳನ್ನು ಬ್ಯಾಗ್ ನಲ್ಲಿಟ್ಟುಕೊಳ್ಳಿ.

ಹಣ್ಣುಗಳು : ಕಾರಿನ ಪ್ರಯಾಣವಿರಲಿ, ಬಸ್ ಇರಲಿ ಇಲ್ಲ ರೈಲಿನಲ್ಲಿ ಪ್ರಯಾಣವಿರಲಿ. ಮಕ್ಕಳು ಅತ್ತಾಗ ವಾಹನ ನಿಲ್ಲಿಸಿ ಮಕ್ಕಳಿಗೆ ಬೇಕಾದ ತಿಂಡಿ ನೀಡಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳು ತಿನ್ನುವ ಕೆಲ ಹಣ್ಣುಗಳನ್ನು ಬ್ಯಾಗ್ ನಲ್ಲಿ ಯಾವಾಗ್ಲೂ ಇಟ್ಟುಕೊಳ್ಳಿ.

ಸ್ನ್ಯಾಕ್ಸ್ ಎಲ್ಲರೂ ಇಷ್ಟಪಡ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಸ್ನ್ಯಾಕ್ಸ್ ಬಾಯಿಗೆ ರುಚಿ ನೀಡುತ್ತದೆ. ಹಾಗಾಗಿ ಪ್ರವಾಸದ ವೇಳೆ ಸ್ನ್ಯಾಕ್ಸ್ ಹಾಗೂ ಹಾಲನ್ನು ಇಟ್ಟುಕೊಳ್ಳಲು ಮರೆಯಬೇಡಿ.

ಪರೋಟಾ ಅಥವಾ ಪುರಿ ಪ್ರವಾಸದ ವೇಳೆ ಒಳ್ಳೆಯದು. ಪ್ರವಾಸಕ್ಕೆ ಹೋಗುವ ಮುನ್ನ ಮಕ್ಕಳಿಗಾಗಿ ಆಲೂ ಪರೋಟಾ ಅಥವಾ ಬೇರೆ ಯಾವುದಾದ್ರೂ ಪರೋಟಾವನ್ನು ಸಿದ್ಧಪಡಿಸಿಕೊಳ್ಳಿ. ಮಕ್ಕಳು ತಿನ್ನಲು ಬೇಕೆಂದಾಗ ಪರೋಟಾವನ್ನು ರೋಲ್ ಮಾಡಿ ಮಕ್ಕಳಿಗೆ ನೀಡಿ. ಇದು ಮಕ್ಕಳನ್ನು ಆಕರ್ಷಿಸುವ ಜೊತೆಗೆ ಹೊಟ್ಟೆ ತುಂಬಿಸುತ್ತದೆ.

ಹಾಲನ್ನು ಬಿಸಿ ಮಾಡಿ ಬಾಟಲಿಗೆ ಹಾಕಿಕೊಂಡು ಹೋದ್ರೆ ಹಾಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಪ್ಯಾಕ್ ಮಾಡಿದ ಹಾಲನ್ನು ತೆಗೆದುಕೊಂಡು ಹೋಗಬಹುದು. ಮಾರುಕಟ್ಟೆಯಲ್ಲಿ ಈಗ ಪ್ಯಾಕ್ ಮಾಡಿದ ಹಾಲು ಸುಲಭವಾಗಿ ಸಿಗುತ್ತದೆ. ಅದನ್ನು ಬ್ಯಾಗ್ ನಲ್ಲಿಟ್ಟುಕೊಂಡರೆ ಮಕ್ಕಳಿಗೆ ಅಗತ್ಯವೆನಿಸಿದಾಗ ನೀಡಬಹುದು.

ಮಕ್ಕಳಿಗೆ ಸಿಹಿ ತಿಂಡಿಯೆಂದ್ರೆ ಇಷ್ಟ. ಪ್ರವಾಸದ ವೇಳೆ ಬೋರ್ ಆಗುವ ಮಕ್ಕಳು ಚಾಕೋಲೇಟ್ ನೀಡುವಂತೆ ಹಠ ಮಾಡ್ತಾರೆ. ಮಕ್ಕಳಿಗೆ ಚಾಕೋಲೇಟ್ ನೀಡುವ ಬದಲು ಮನೆಯಲ್ಲಿ ಮಾಡಿದ ಸಿಹಿತಿಂಡಿಯನ್ನು ನೀಡಿ.

 

ಸೆಕ್ಸ್ ಲೈಫ್ ನಾಶ ಮಾಡುತ್ತೆ ಈ ಹವ್ಯಾಸ

$
0
0

ಒತ್ತಡದ ಜೀವನ ಶೈಲಿ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಸಂಗಾತಿ ಕುಳಿತು ಮಾತನಾಡಲೂ ಸಮಯ ಸಿಗೋದಿಲ್ಲ. ಜವಾಬ್ದಾರಿ, ಒತ್ತಡದಿಂದಾಗಿ ಹೊಂದಾಣಿಕೆ ಕಡಿಮೆಯಾಗುತ್ತದೆ. ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ದಂಪತಿ ಮಧ್ಯೆ ನಿಧಾನವಾಗಿ ಅಂತರ ಸೃಷ್ಟಿಯಾಗುತ್ತದೆ. ಸುಖ ದಾಂಪತ್ಯ ಬಯಸುವವರು ತಕ್ಷಣ ಈ ಮೂರು ಹವ್ಯಾಸವನ್ನು ಬಿಡಬೇಕು. ಆಗ ಮಾತ್ರ ಲೈಂಗಿಕ ಜೀವನದ ಜೊತೆ ದಾಂಪತ್ಯ ಸುಖವಾಗಿರಲು ಸಾಧ್ಯ.

ಅಧ್ಯಯನವೊಂದರ ಪ್ರಕಾರ ಅತಿಯಾದ ಮಾಸ್ಟರ್ಬೇಷನ್ ಒಳ್ಳೆಯದಲ್ಲ. ಇದು ಭವಿಷ್ಯದಲ್ಲಿ ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತದೆ.

ಮಾಸ್ಟರ್ಬೇಷನ್ ವೇಳೆ ಡೋಪಾಮೈನ್ ಉತ್ಪತ್ತಿಯಾಗುತ್ತದೆ. ಇದು ವ್ಯಕ್ತಿಗೆ ಹೆಚ್ಚೆಚ್ಚು ಖುಷಿ ನೀಡುತ್ತದೆ. ಇದು ವ್ಯಕ್ತಿಯನ್ನು ರಿಲ್ಯಾಕ್ಸ್ ಮೂಡಿಗೆ ಕರೆದೊಯ್ಯುತ್ತದೆ. ಅತಿ ಹೆಚ್ಚು ಮಾಸ್ಟರ್ಬೇಷನ್ ನಿಂದ ಹೆಚ್ಚು ಡಾಪ್ಅಮೈನ್ ಉತ್ಪತ್ತಿಯಾಗುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾದ್ರೆ ಮೆದುಳು ಲೈಂಗಿಕತೆ ಪರವಾಗಿ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸುತ್ತದೆ.

ಬಿಜೆಯು ಇಂಟರ್ನ್ಯಾಷನಲ್ ನಲ್ಲಿ ಪ್ರಕಟವಾದ ವರದಿ ಪ್ರಕಾರ ಧೂಮಪಾನ ಕೂಡ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಮಹಿಳೆ ಹಾಗೂ ಪುರುಷ ಧೂಮಪಾನಿಗಳಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತ ಬರುತ್ತದೆ.

ಯುವ ಜನತೆಯಲ್ಲಿ ಕಾಮಾಸಕ್ತಿ ಕಡಿಮೆಯಾಗಲು ನಿಷ್ಕ್ರಿಯ ಜೀವನಶೈಲಿ ಕಾರಣ. ಪ್ರತಿನಿತ್ಯ ಕೆಲಸದಲ್ಲಿ ಚುರುಕಾಗಿರದೇ ಅನೇಕ ಸಮಯವನ್ನು ನಿಷ್ಕ್ರಿಯವಾಗಿ ಕಳೆಯುವವರಲ್ಲಿ ಕಾಮಾಸಕ್ತಿ ಕಡಿಮೆಯಾಗ್ತಾ ಬರುತ್ತದೆ. ರಕ್ತದ ಹರಿವು ಸರಿಯಾಗದಿರುವುದೇ ಇದಕ್ಕೆ ಕಾರಣವಾಗಿದೆ.

ಹೇರ್ ಸ್ಪಾನಲ್ಲಿ ಶಾರುಕ್ ಪುತ್ರಿ ಮಾಡಿದ್ದೇನು ಗೊತ್ತಾ…?

$
0
0

ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಹಂ ತಮ್ಮದೇ ಆದ ಅಭಿಮಾನಿಗಳನ್ನ ಹೊಂದಿದ್ದಾರೆ. ಇದಕ್ಕೆ ಅವರ ಗ್ಲಾಮರಸ್ ಪೋಷಕರಾದ ಶಾರುಕ್ ಮತ್ತು ಗೌರಿ ಖಾನ್ ಕೂಡಾ ಕಾರಣ ಇರಬಹುದು.

ಆರ್ಯನ್ ಮತ್ತು ಸುಹಾನ ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ, ವಿಡಿಯೋಗಳನ್ನು ಅಪ್ ಡೇಟ್ ಮಾಡ್ತಾ ತುಂಬಾ ಆಕ್ವಿವ್ ಆಗಿರ್ತಾರೆ. ಸದ್ಯ ಇಬ್ಬರು ಮಕ್ಕಳು ಓದುತ್ತಿದ್ದು, ತಮ್ಮ ಮುಂದಿನ ಕೆರಿಯರ್ ಬಗ್ಗೆ ಯೋಚನೆ ಮಾಡ್ತಿದ್ದಾರೆ.

ಈ ಮಧ್ಯೆ ತನ್ನ ಶಾಲಾ ಗೆಳತಿಯರೊಂದಿಗೆ ಸ್ಪಾ ನಲ್ಲಿ ಟ್ರೀಟ್ ಮೆಂಟ್ ಪಡೆಯುತ್ತಿರೋ ವಿಡಿಯೋವನ್ನು ಸುಹಾನಾ ಅಪ್ ಲೋಡ್ ಮಾಡಿದ್ದಾರೆ. ಹೇರ್ ಸ್ಪಾನಲ್ಲಿ ಕ್ಯಾಶುವಲ್ ಔಟ್ ಫಿಟ್ ಧರಿಸಿರುವ ಸುಹಾನ ತನ್ನ ಸ್ನೇಹಿತೆಯರಿಗೆ ಸಹಾಯ ಮಾಡ್ತಿರೋದು, ಜೊತೆಗೆ ಅವರ ಸ್ಟ್ರೆಸ್ ಕಡಿಮೆ ಮಾಡುವಂತೆ ಸ್ಪಾ ನಲ್ಲಿರುವ ವ್ಯಕ್ತಿಗೆ ಹೇಳುತ್ತಿರುವುದು ವಿಡಿಯೋದಲ್ಲಿದೆ. ಹೀಗೆ ಸುಹಾನ ಯಾವುದೇ ಕೆಲಸ ಮಾಡಿದ್ರೂ ಅದರಲ್ಲಿ ಸಂಪೂರ್ಣ ತೊಡಗಿಸಿಕೊಳ್ತಾರೆ. ತುಂಬಾ ಪ್ರೀತಿ,  ಮುತುವರ್ಜಿ ಇರುವ ಹುಡುಗಿ ಸುಹಾನ.

ಇನ್ನು ಮೊನ್ನೆಯಷ್ಟೇ ಸುಹಾನ ಪಾರ್ಟಿಯೊಂದರಲ್ಲಿ ತನ್ನ ಸ್ನೇಹಿತರೊಂದಿಗೆ ಮ್ಯೂಸಿಕಲ್ ಚೇರ್ ಆಟವಾಡಿದ ವಿಡಿಯೋ ಅಪ್ ಲೋಡ್ ಮಾಡಿದ್ಲು. ಈ ವಿಡಿಯೋಗಳನ್ನ ನೋಡಿದ್ರೆ ತಿಳಿಯುತ್ತೆ ಶಾರುಕ್ ಪುತ್ರಿ ಬೇರೆಯವರನ್ನ ಹೇಗೆ ಖುಷಿಯಾಗಿಡಬೇಕು, ಅವರನ್ನ ಹೇಗೆ ಸಂತೋಷವಾಗಿಡಲು ಪ್ರಯತ್ನಿಸುತ್ತಾಳೆ ಅಂತಾ.

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

$
0
0

ಮೇಷ ರಾಶಿ

ಕುಟುಂಬದವರೊಂದಿಗೆ ಉಗ್ರ ವಾದ-ವಿವಾದ ನಡೆಯಲಿದೆ. ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹದಗೆಡಲಿದೆ. ಹಾಗಾಗಿ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

ವೃಷಭ ರಾಶಿ

ಇಂದು ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗಲಿದೆ. ಪ್ರತಿಸ್ಪರ್ಧಿಗಳೆದುರು ವಿಜಯಿಯಾಗಲಿದ್ದೀರಿ. ಸಾಮಾಜಿಕವಾಗಿ ಗೌರವ ಪ್ರತಿಷ್ಠೆ ದೊರೆಯಲಿದೆ.

ಮಿಥುನ ರಾಶಿ

ಇಂದು ಕೆಲಸದಲ್ಲಿ ಸಫಲತೆ ಹಾಗೂ ಯಶಸ್ಸು ನಿಶ್ಚಿತ. ಕುಟುಂಬದವರೊಂದಿಗೆ ಪ್ರೀತಿಯಿಂದ ವ್ಯವಹರಿಸಿ. ಆರೋಗ್ಯ ಉತ್ತಮವಾಗಿರುತ್ತದೆ. ಅನಾರೋಗ್ಯಕ್ಕೆ ತುತ್ತಾದವರು ಕೂಡ ಚೇತರಿಸಿಕೊಳ್ಳಲಿದ್ದಾರೆ.

ಕರ್ಕ ರಾಶಿ

ಇಂದು ದಿನದ ಆರಂಭ ಉತ್ತಮವಾಗಿರುತ್ತದೆ. ಮಿತ್ರರು ಮತ್ತು ಕುಟುಂಬ ಸದಸ್ಯರೊಂದಿಗೆ ಭೋಜನ ಸವಿಯಲಿದ್ದೀರಿ. ಸುಂದರ ವಸ್ತ್ರ ಧಾರಣೆಯ ಭಾಗ್ಯವಿದೆ.

ಸಿಂಹ ರಾಶಿ

ಇಂದು ಸಮಾಧಾನದಿಂದ ದಿನ ಕಳೆಯಲಿದ್ದೀರಿ. ಹೊಸ ಕಾರ್ಯವನ್ನು ಆರಂಭಿಸಬೇಡಿ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಅನೈತಿಕ ಕಾರ್ಯಗಳಿಂದ ದೂರವಿರಿ.

ಕನ್ಯಾ ರಾಶಿ

ವ್ಯಾಪಾರವನ್ನು ವಿಸ್ತರಿಸಲಿದ್ದೀರಿ. ಹಣಕಾಸಿನ ಕೊಡು-ಕೊಳ್ಳುವಿಕೆ ಸರಳವಾಗಲಿದೆ. ಮನೆಯಲ್ಲಿ ಶಾಂತವಾದ ಮತ್ತು ಆನಂದದಾಯಕ ವಾತಾವರಣವಿರುತ್ತದೆ.

ತುಲಾ ರಾಶಿ

ಇಂದು ಅನೇಕ ರೀತಿಯ ಲಾಭಗಳಿಂದಾಗಿ ಹರ್ಷೋಲ್ಲಾಸ ದ್ವಿಗುಣವಾಗಲಿದೆ. ಪತ್ನಿ ಅಥವಾ ಪುತ್ರನಿಂದ ಲಾಭದಾಯಕ ಸಮಾಚಾರ ದೊರೆಯಲಿದೆ. ಮಿತ್ರರ ಭೇಟಿಯಿಂದ ಸಂತೋಷವಾಗಲಿದೆ.

ವೃಶ್ಚಿಕ ರಾಶಿ

ಇಂದು ನಿಮಗೆ ಶುಭ ದಿನ. ಮನೆಯಲ್ಲಿ ಸುಖಮಯ ಪ್ರಸಂಗಗಳು ನಡೆಯುತ್ತವೆ. ಯಾವ ಕಾರ್ಯವನ್ನು ಕೈಗೊಂಡರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.

ಧನು ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಗದಿತ ಕಾರ್ಯಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಲಾಭ ಪ್ರಾಪ್ತಿಯಾಗಲಿದೆ. ಮಂಗಳ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.

ಮಕರ ರಾಶಿ

ಸಂವೇದನಶೀಲತೆಯನ್ನು ನಿಯಂತ್ರಿಸಿಕೊಳ್ಳಿ. ಆರೋಗ್ಯದ ಬಗ್ಗೆ ಚಿಂತಿತರಾಗಲಿದ್ದೀರಿ. ಅಧಿಕ ಚಿಂತೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಬಿಗಡಾಯಿಸಲಿದೆ.

ಕುಂಭ ರಾಶಿ

ಇಂದು ಶುಭ ದಿನ. ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸು ವಹಿವಾಟಿಗೆ ಯಾವುದೇ ಅಡ್ಡಿಯಿಲ್ಲ. ದಿನವಿಡೀ ಮನರಂಜನಾ ಪ್ರವೃತ್ತಿಯಲ್ಲಿ ತೊಡಗಿಕೊಳ್ಳುತ್ತೀರಿ.

ಮೀನ ರಾಶಿ

ಅಶಾಂತಿ ಮತ್ತು ಉದ್ವೇಗ ಮನಸ್ಸನ್ನು ಆವರಿಸಿರುತ್ತದೆ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಶಾರೀರಿಕ ಆರೋಗ್ಯ ಉತ್ತಮವಾಗಿರುವುದಿಲ್ಲ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಹೆಸರಿನ ರಾಶಿಗನುಗುಣವಾಗಿ 7 ದಿನ ಈ ಕೆಲಸ ಮಾಡಿ ಫಲಿತಾಂಶ ನೋಡಿ

$
0
0

ಜಾತಕದ ರಾಶಿ ಗೊತ್ತಿರಲಿ ಬಿಡಲಿ ಹೆಸರಿನ ಮೇಲೆ ಬರುವ ರಾಶಿ ಎಲ್ಲರಿಗೂ ತಿಳಿದಿರುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರಕ್ಕೂ ರಾಶಿಗೂ ಸಂಬಂಧವಿದೆ. ನಕ್ಷತ್ರ, ರಾಶಿ ನಿಮಗೆ ಗೊತ್ತಿಲ್ಲವಾದ್ರೆ ಚಿಂತೆ ಬೇಡ. ನಿಮ್ಮ ಹೆಸರಿನ ಮೊದಲ ಅಕ್ಷರ ಯಾವ ರಾಶಿಗೆ ಸೇರುತ್ತದೆ ಎಂಬುದು ಗೊತ್ತಿರಲಿ.

ಹೆಸರು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒಳ್ಳೆ ಉದ್ಯೋಗ, ಮದುವೆ, ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ನಿಮ್ಮ ಹೆಸರಿನ ರಾಶಿಗನುಗುಣವಾಗಿ ಕೆಲವೊಂದು ಉಪಾಯಗಳನ್ನು ಮಾಡಿ. ಶುಕ್ರನನ್ನು ಬಲಪಡಿಸಿಕೊಳ್ಳಿ.

ಮೇಷ ರಾಶಿ ( ಅ,ಲ,ಚ) : ಏಳು ದಿನಗಳ ಕಾಲ ಬೆಲ್ಲ-ನೀರು, ಹಾಲಿನಿಂದ ಮಾಡಿದ ಮಿಠಾಯಿಯನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ. ಮೊಸರಿನ ತಿಲಕ ಹಚ್ಚಿ.

ವೃಷಭ ರಾಶಿ (ಇ,ಉ,ಎ,ಒ,ವ) : 7 ದಿನಗಳ ಕಾಲ ಕರ್ಪೂರವನ್ನು ನೀರಿಗೆ ಹಾಕಿ ಸ್ನಾನ ಮಾಡಿ. ಶಿವಲಿಂಗಕ್ಕೆ ಗುಲಾಬಿ ಹೂವನ್ನು ಅರ್ಪಿಸಿ.

ಮಿಥುನ (ಕ,ಜ,ಹ) : ನೀರಿಗೆ ಗುಲಾಬಿ ಹೂವನ್ನು ಹಾಕಿ ಸ್ನಾನ ಮಾಡಿ. ಮಹಿಳೆಗೆ 7 ದಿನಗಳ ಕಾಲ ಅಕ್ಕಿಯನ್ನು ದಾನ ರೂಪದಲ್ಲಿ ನೀಡಿ.

ಕರ್ಕ (ಹ,ಡ) :ಬೆಳಿಗ್ಗೆ ಗುಲಾಬಿ ದಳಗಳನ್ನು ನೀರಿಗೆ ಹಾಕಿ ಸ್ನಾನ ಮಾಡಬೇಕು. ಹಾಲಿನ ತಿಲಕವನ್ನಿಟ್ಟುಕೊಳ್ಳಿ.

ಸಿಂಹ (ಮ,ಟ) : 7 ದಿನಗಳವರೆಗೆ ಬೆಳ್ಳಿ ಆಭರಣವನ್ನು ಧರಿಸಿ. ಶಿವಲಿಂಗಕ್ಕೆ ಪೂಜೆ ಮಾಡಿ.

ಕನ್ಯಾ (ಪ) : 7 ದಿನಗಳ ಕಾಲ ಕನ್ಯೆಗೆ ಎಳನೀರು ಅಥವಾ ಖೀರ್ ತಿನ್ನಿಸಿ. ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ.

ತುಲಾ (ರ.ತ) : 7 ದಿನಗಳ ಕಾಲ ಸ್ಫಟಿಕ ಅಥವಾ ಮುತ್ತಿನ ಹಾರವನ್ನು ಧರಿಸಿ. ಲಕ್ಷ್ಮಿಗೆ ಬರ್ಫಿಯನ್ನು ಅರ್ಪಿಸಿ.

ವೃಶ್ಚಿಕ (ನ,ಯ) : ಏಳು ದಿನಗಳ ಕಾಲ ಗುಲಾಬಿ ಬಣ್ಣದ ಬಟ್ಟೆ ಧರಿಸಿ. ಗುಲಾಬಿ ಸುಗಂಧ ಹಾಕಿಕೊಳ್ಳಿ. ಅನ್ನವನ್ನು ದಾನವಾಗಿ ನೀಡಿ.

ಧನು ( ಯ,ಮ,ಪ) : ಗೋಡಂಬಿ ಬರ್ಫಿ ತಯಾರಿಸಿ ಲಕ್ಷ್ಮಿಗೆ ಅರ್ಪಿಸಿ ಅದನ್ನು ಸೇವನೆ ಮಾಡಿ. 7 ದಿನಗಳ ಕಾಲ ಮಹಿಳೆಗೆ ಹಣ ದಾನ ಮಾಡಿ.

ಮಕರ ( ಛ,ಖ,ಗ) :ಏಳು ದಿನಗಳ ಕಾಲ ಗೋಡಂಬಿ ಸೇವನೆ ಮಾಡಿ. ಮಹಿಳೆಗೆ ಮೊಸರನ್ನು ದಾನ ನೀಡಿ. ಕ್ರೀಂ ಕಲರ್ ಬಟ್ಟೆ ಧರಿಸಿ.

ಕುಂಭ (ಸ) :ಏಲಕ್ಕಿಯಿಂದ ಮಾಡಿದ ಮಿಠಾಯಿಯನ್ನು ದೇವರಿಗೆ ಅರ್ಪಿಸಿ. ಚಂದನದ ತಿಲಕವಿಟ್ಟುಕೊಳ್ಳಿ.

ಮೀನ (ದ) :ನೀರಿಗೆ ಚಂದನ ಹಾಕಿ ಸ್ನಾನ ಮಾಡಿ. 7 ದಿನ ನಿರಂತರವಾಗಿ ಸುಗಂಧ ಹಾಕಿಕೊಳ್ಳಿ. ಯಾವುದೇ ಮಹಿಳೆಗೆ ಹಾಲನ್ನು ದಾನ ಮಾಡಿ.

ಮದುವೆಗೂ ಮುನ್ನ ಪೊಲೀಸರಿಗೆ ಮಾಹಿತಿ ನೀಡಬೇಕು ದಲಿತರು

$
0
0

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಹಿಂದಪುರ್ ಎಸ್ಡಿಎಂ, ದಲಿತರ ವಿರುದ್ಧ ತುಘಲಕ್ ತೀರ್ಪೊಂದನ್ನು ಜಾರಿ ಮಾಡಿದೆ. ಮಹಿಂದಪುರ್ ತಹಶೀಲ್ದಾರ್ ಅಡಿ ಬರುವ ಗ್ರಾಮಗಳ ಸರ್ಪಂಚ್ ಗಳಿಗೆ ಎಸ್ ಡಿ ಎಂ ಫರ್ಮಾನು ಹೊರಡಿಸಿದೆ. ದಲಿತರು ಮದುವೆ ಮೆರವಣಿಗೆ ಹೊರಡುವ ಮೂರು ದಿನ ಮೊದಲು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಪೊಲೀಸ್ ಕಾನ್ಸ್ ಸ್ಟೇಬಲ್ ರಿಂದ ಒಪ್ಪಿಗೆ ಪತ್ರ ಪಡೆಯುವಂತೆ ಎಸ್ ಡಿ ಎಂ ಸೂಚನೆ ನೀಡಿದೆ.

ಈ ಆದೇಶಕ್ಕೆ ದಲಿತರಿಂದ ವಿರೋಧ ವ್ಯಕ್ತವಾಗಿದೆ. ಎಸ್ಡಿಎಂ ವಿರುದ್ಧ ತನಿಖೆ ನಡೆಸುವಂತೆ ದಲಿತ ಸಂಘಟನೆ ಒತ್ತಾಯ ಮಾಡಿದೆ. ಆದೇಶ ಬದಲಿಸುವಂತೆ ದಲಿತರು ಒತ್ತಾಯಿಸಿದ್ದಾರೆ.

ಏಪ್ರಿಲ್ 30ರಂದು ರಾಜಸ್ತಾನದ ಗೋವರ್ದನ ಪುರ ಗ್ರಾಮದಲ್ಲಿ ದಲಿತರ ಮದುವೆ ದಿಬ್ಬಣಕ್ಕೆ ಕೆಲವರು ಅಡ್ಡಿಪಡಿಸಿದ್ದರು. ಕುದುರೆ ಮೇಲೆ ಸವಾರಿ ಮಾಡಿದ್ದ ವರನನ್ನು ತಡೆದು ಹಲ್ಲೆ ನಡೆಸಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಳು ಜನರನ್ನು ಬಂಧಿಸಿದ್ದರು.

ಗುಜರಾತಿನಲ್ಲಿ ಕೂಡ ಕುದುರೆ ಏರಿದ್ದ ದಲಿತ ವರನನ್ನು ಹತ್ಯೆ ಮಾಡಿದ ಸುದ್ದಿ ಅನೇಕ ದಿನಗಳ ಹಿಂದೆ ವರದಿಯಾಗಿತ್ತು. ಇಂಥ ಪ್ರಕರಣಕ್ಕೆ ಕಡಿವಾಣ ಹಾಕಲು ಎಸ್ ಡಿ ಎಂ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗ್ತಿದೆ.

 

ಸೇನಾ ಟ್ರಕ್ ನಿಂದ ಮಳೆಯಂತೆ ಸುರಿಯಿತು ಹಣ…!

$
0
0

ಸೇನೆಯ ವಾಹನದಲ್ಲಿ ಹಣ ತುಂಬಿಸಿಕೊಂಡು ಹೋಗುವಾಗ, ಟ್ರಕ್ ನ ಬಾಗಿಲು ತೆರೆದು ಹಣವೆಲ್ಲಾ ರಸ್ತೆಯಲ್ಲಿ ಚೆಲ್ಲಿದ ಘಟನೆ ಇಂಡಿಯಾನಾದಲ್ಲಿ ನಡೆದಿದೆ.

ಸರಿ ಸುಮಾರು 6 ದಶಲಕ್ಷ ಡಾಲರ್ ಹಣವಿದ್ದ ಸೇನಾ ಟ್ರಕ್, ಇಂಡಿಯಾನದಿಂದ ಮತ್ತೊಂದು ರಾಜ್ಯಕ್ಕೆ ಹೋಗುತ್ತಿತ್ತು. ಈ ವೇಳೆ ಅಚಾನಕ್ಕಾಗಿ ಟ್ರಕ್ ಬಾಗಿಲು ತೆರೆದು, ಅದರಲ್ಲಿದ್ದ ಹಣವೆಲ್ಲ ಹಾರಿ ರಸ್ತೆಯಲ್ಲಿ ಬಿದ್ದಿದೆ.

ಈ ವೇಳೆ ಅದೇ ಹೈವೇಯಲ್ಲಿ ಸಂಚರಿಸುತ್ತಿದ್ದ ಸ್ಕೂಲ್ ಬಸ್ ಚಾಲಕನೊಬ್ಬ ಹಣವನ್ನು ಆಯ್ದುಕೊಂಡಿದ್ದಾನೆ. ಅಲ್ಲದೆ ಇನ್ನೂ ಮೂರ್ನಾಲ್ಕು ಮಂದಿ ಹಣ ತೆಗೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಸೇನಾ ಅಧಿಕಾರಿಗಳು ಹಣ ಹಿಂದಿರುಗಿಸುವಂತೆ ವಾರ್ನಿಂಗ್ ಮಾಡಿದ್ದಾರೆ. ಇಲ್ಲದಿದ್ದರೆ ಹಣ ಆಯ್ದುಕೊಂಡವರ ಮೇಲೆ ಕೇಸ್ ಬುಕ್ ಮಾಡೋದಾಗಿ ತಿಳಿಸಿದ್ದಾರೆ.

ಆದ್ರೆ ಆ ಸೇನಾ ಟ್ರಕ್ ನಲ್ಲಿ ನಿಖರವಾಗಿ ಹಣ ಎಷ್ಟಿತ್ತೆಂದು ಗೊತ್ತಿಲ್ಲ. ಅಂದಾಜಿನ ಪ್ರಕಾರ ಸರಿಸುಮಾರು 6 ದಶಲಕ್ಷ ಡಾಲರ್ ಇದ್ದಿರಬಹುದು ಎಂದು ಹೇಳಲಾಗ್ತಿದೆ. ಇನ್ನು ಟ್ರಕ್ ನಿಂದ ಬಿದ್ದ ಹಣವನ್ನು ತೆಗೆದುಕೊಳ್ಳಲು ಸೇನಾ ಅಧಿಕಾರಿಗಳು ಸ್ಥಳದಲ್ಲಿ ಟ್ರಾಫಿಕ್ ಜಾಮ್ ಮಾಡಿದ್ರು.


ನಿಮ್ಮ ಮೊಬೈಲ್ ನಲ್ಲಿ ಮಾಡಲೇಬೇಡಿ ಈ ಕೆಲಸ

$
0
0

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್. ವಿಶ್ವದಲ್ಲಿ ಅಸಂಖ್ಯಾತ ಜನ ಮೊಬೈಲ್ ಬಳಸುತ್ತಿದ್ದರೂ ಅದನ್ನು ಬಳಸುವ ಬಗ್ಗೆ ಸರಿಯಾದ ಮಾಹಿತಿ ಗೊತ್ತಿರುವುದಿಲ್ಲ. ಮೊಬೈಲ್ ಹೊಂದಿರುವವರು ಅದರ ನಿರ್ವಹಣೆ ಮಾಡುವುದನ್ನು ಕೂಡ ತಿಳಿದಿರಬೇಕು. ಇಲ್ಲದಿದ್ದರೆ ಅನಾಹುತ ಗ್ಯಾರಂಟಿ.

ಇತ್ತೀಚೆಗೆ ಹೆಚ್ಚಿನ ಜನ ಸ್ಮಾರ್ಟ್ ಫೋನ್ ಬಳಸುತ್ತಾರೆ. ವಿವಿಧ ಕಂಪನಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಕೆಲವು ಫೋನ್ ಗಳ ಬ್ಯಾಟರಿ ಬಾಳಿಕೆ ಬಂದರೆ, ಮತ್ತೆ ಕೆಲವು ಬಹುಬೇಗನೆ ಚಾರ್ಜ್ ಖಾಲಿಯಾಗಿ ಬಿಡುತ್ತವೆ. ಕೆಲವರು ಬ್ಯಾಟರಿ ಚಾರ್ಜ್ ಖಾಲಿಯಾದಾಗ ಅದನ್ನು ಚಾರ್ಜ್ ಮಾಡುವುದಿಲ್ಲ. ಬದಲಿಗೆ ರಾತ್ರಿ ವೇಳೆಯಲ್ಲಿ ಚಾರ್ಜ್ ಗೆ ಹಾಕುತ್ತಾರೆ. ಸೌಂಡ್ ಬರಬಾರದೆಂದು ದಿಂಬಿನ ಕೆಳಗೆ ಮೊಬೈಲ್ ಫೋನ್ ಇಡುತ್ತಾರೆ. ಹೀಗೆ ರಾತ್ರಿಯಿಡಿ ಚಾರ್ಜ್ ಆಗುವ ಫೋನ್ ಗಳು ಕೆಲವೊಮ್ಮೆ ಓವರ್ ಹೀಟ್ ಆಗಿ ಸ್ಪೋಟಗೊಳ್ಳುತ್ತವೆ.

ದಿಂಬಿನ ಕೆಳಗೆ ಚಾರ್ಜ್ ಆಗುವ ಫೋನ್ ಗಳು ಹೇಗೆಲ್ಲಾ ಆನಾಹುತ ಸೃಷ್ಟಿಸುತ್ತವೆ ಎಂಬುದು ಈಗಾಗಲೇ ಸಾಕಷ್ಟು ಬಾರಿ ನೋಡಿದ್ದೇವೆ. ಕೆಲವು ಮೊಬೈಲ್ ಬ್ಯಾಟರಿ ನಿಕ್ಕಲ್ ಮೆಟಲ್ ಹೈಡ್ರೈಡ್ ಬ್ಯಾಟರಿಗಳಾಗಿದ್ದು, ಇವು ಫುಲ್ ಚಾರ್ಜ್ ಆದರೂ, ಆಫ್ ಆಗಲ್ಲ, ಸುಮ್ಮನೆ ಚಾರ್ಜ್ ಆಗುತ್ತಲೇ ಇರುತ್ತವೆ.

ಆದರೆ, ಲಿಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಫೋನ್ ಗಳು ಪೂರ್ಣ ಚಾರ್ಜ್ ಆದ ನಂತರ ಆಫ್ ಆಗುತ್ತವೆ. ದಿಂಬಿನ ಕೆಳಗೆ ಚಾರ್ಜ್ ಗೆ ಇಟ್ಟ ಫೋನ್ ಗಳು ಹೇಗೆಲ್ಲಾ ಸ್ಪೋಟಗೊಂಡಿವೆ ಎಂಬುದು ನಿಮ್ಮ ಗಮನದಲ್ಲಿರಲಿ.

ದುಶ್ಚಟಗಳಿಗೆ ದಾಸರಾಗಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ

$
0
0

ಇಂದಿನ ಯುವ ಜನಾಂಗ ಕುಡಿತ, ಸಿಗರೇಟು, ತಂಬಾಕು ಸೇವನೆ ಸೇರಿದಂತೆ ಹಲವು ದುಶ್ಚಟಗಳ ದಾಸರಾಗಿ ಪರಿತಪಿಸುತ್ತಿದೆ. ಮೊದಲು ಶೋಕಿಗೆಂದು ಆರಂಭವಾಗುವ ಈ ಚಟಗಳು ಬಳಿಕ ಅದರಿಂದ ಹೊರ ಬಾರದಂತೆ ಆಕ್ರಮಿಸಿಕೊಳ್ಳುತ್ತವೆ. ಇದರಿಂದಾಗಿ ಆರೋಗ್ಯ, ಮಾನಸಿಕ ಸ್ಥಿತಿಗತಿಗಳು ಹಾಳಾಗುತ್ತದಲ್ಲದೇ ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಯಾವುದೇ ಒಂದು ದುಶ್ಚಟದಿಂದ ಹೊರ ಬರಲು ದೃಢ ನಿರ್ಧಾರ ಬಹು ಮುಖ್ಯವಾಗುತ್ತದೆ. ಈ ದುಶ್ಚಟಗಳಿಂದ ಆಗುತ್ತಿರುವ ಹಾನಿ ಕುರಿತು ಸಮಾಧಾನಚಿತ್ತವಾಗಿ ಕುಳಿತು ಯೋಚಿಸಿ ಬಳಿಕ ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಚಟವನ್ನು ತ್ಯಜಿಸಲು ತೆಗೆದುಕೊಂಡಿರುವ ನಿರ್ಧಾರದ ಕುರಿತು ಅತ್ಮೀಯರಾಗಿರುವವರೊಂದಿಗೆ ಹೇಳಿಕೊಂಡರೆ ಉತ್ತಮ. ಒಂದೊಮ್ಮೆ ಮತ್ತೆ ಆ ಚಟ ಮಾಡುವ ವೇಳೆ ಅವರು ಗಮನಿಸಿಯಾರೆಂಬ ಅಳುಕಿಗಾದರೂ ಅದನ್ನು ತ್ಯಜಿಸುತ್ತಾರೆ. ದುಶ್ಚಟ ತ್ಯಜಿಸಿದ ಬಳಿಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಮುಖ್ಯವಾಗುತ್ತದೆ. ಪುಸ್ತಕ ಓದುವುದು, ಸಂಗೀತ ಕೇಳುವುದು, ಧ್ಯಾನ, ಯೋಗ ಮೊದಲಾದ ಕಡೆ ಗಮನ ಹರಿಸುವುದು ಸೂಕ್ತ.

ಈ ಚಟದಿಂದ ಆಗುತ್ತಿರುವ ಆರ್ಥಿಕ ಹಾನಿಯ ಕುರಿತು ಲೆಕ್ಕ ಹಾಕಿ ಆ ಚಟವನ್ನು ತ್ಯಜಿಸಿದ ಬಳಿಕ ಉಳಿತಾಯವಾಗುತ್ತಿರುವ ಹಣವನ್ನು ಒಂದೆಡೆ ಕೂಡಿಡುತ್ತಾ ಬನ್ನಿ. ಆ ಮೊತ್ತವನ್ನು ತಿಂಗಳ ಬಳಿಕ ನೋಡಿದರೆ ಇದುವರೆಗೂ ಚಟಕ್ಕಾಗಿ ಸುರಿದ ಹಣದ ಕಾರಣಕ್ಕಾಗಿ ಪಶ್ಚಾತಾಪವಾಗುತ್ತದೆ. ಉಳಿತಾಯವಾಗಿರುವ ಈ ಹಣದಲ್ಲಿ ಕುಟುಂಬದವರನ್ನು ವಾರಾಂತ್ಯದ ದಿನಗಳಂದು ಹೊರಗಡೆ ಕರೆದುಕೊಂಡು ಹೋಗಿ ಊಟ ಮಾಡಿ. ಇದರಿಂದ ಅವರುಗಳಿಗೂ ಸಂತೋಷವಾಗುತ್ತದೆ. ನಿಮಗೂ ಆತ್ಮ ತೃಪ್ತಿ ದೊರೆಯುತ್ತದೆ. ಇನ್ನೇಕೆ ತಡ ಈಗಿನಿಂದಲೇ ದುಶ್ಚಟಗಳಿಂದ ಹೊರ ಬರಲು ಪ್ರಯತ್ನ ಆರಂಭಿಸಿ.

ಇನ್ಮುಂದೆ ಗೂಗಲ್ ಬುಕ್ ಮಾಡುತ್ತೆ ಸಿನಿಮಾ ಟಿಕೆಟ್

$
0
0

ಸಿನಿಮಾ ನೋಡುವ ಮನಸ್ಸಾಗಿದ್ದು, ಟಿಕೆಟ್ ಬುಕ್ ಮಾಡಲು ಆಲಸ್ಯವಾಗ್ತಿದ್ದರೆ ಚಿಂತೆ ಬೇಡ. ಇನ್ಮುಂದೆ ಟಿಕೆಟ್ ಬುಕ್ಕಿಂಗ್ ಕೆಲಸವನ್ನೂ ಗೂಗಲ್ ಮಾಡಲಿದೆ. ಯಸ್, ಗೂಗಲ್ ಸಹಾಯಕರ ಮೂಲಕ ನೀವು ಟಿಕೆಟ್ ಬುಕ್ ಮಾಡಬಹುದಾಗಿದೆ.

ಇದಕ್ಕಾಗಿ ಗೂಗಲ್ ಅಮೆರಿಕಾದ ಟಿಕೆಟಿಂಗ್ ಕಂಪನಿ Fundongo ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಪಾಲುದಾರಿಕೆ ನಂತ್ರ ಬಳಕೆದಾರರು ಧ್ವನಿ ಆಜ್ಞೆ ಮೂಲಕ ಗೂಗಲ್ ಸಹಾಯಕರಿಂದ ಸಿನಿಮಾ ಟಿಕೆಟ್ ಬುಕ್ ಮಾಡಬಹುದಾಗಿದೆ. ಅಮೆರಿಕಾ ಡಿಜಿಟಲ್ ಮೀಡಿಯಾ ಈ ಬಗ್ಗೆ ವರದಿ ಪ್ರಸಾರ ಮಾಡಿದೆ. ಗೂಗಲ್ Fundongo ಜೊತೆ ಟಿಕೆಟ್ ಖರೀದಿ ಒಪ್ಪಂದ ಮಾಡಿಕೊಂಡಿದೆ.

Fundongo ತನ್ನ ವೆಬ್ಸೈಟ್ ಹಾಗೂ ಮೊಬೈಲ್ ಆ್ಯಪ್ ಜೊತೆ ಟಿಕೆಟ್ ಮಾರಾಟ ಮಾಡುವ ಕೆಲಸ ಮಾಡ್ತಿದೆ. ಬೈ ಟಿಕೆಟ್ ಅಥವಾ hey google buy me tickets for… ಹೇಳಿದ್ರೆ ಸಾಕು. ನಿಮಗೆ ಹತ್ತಿರದ ಥಿಯೇಟರ್ ಅಥವಾ ಸಿನಿಮಾ ಹೆಸರು ನೆನಪಿಲ್ಲವೆಂದಾದ್ರೆ ‘show times near me’ ಎಂದು ಹೇಳಿದ್ರೆ ಸಾಕು. ಗೂಗಲ್ ನಿಮ್ಮ ಹತ್ತಿರದಲ್ಲಿ ಯಾವ ಸಿನಿಮಾ ಥಿಯೇಟರ್ ಇದೆ, ಯಾವ ಸಿನಿಮಾ ಇದೆ ಎಂಬ ಮಾಹಿತಿ ನೀಡುತ್ತದೆ.

ಇಷ್ಟೇ ಅಲ್ಲ ಚಿತ್ರದ ಬಗ್ಗೆ ಎಲ್ಲ ಮಾಹಿತಿಯನ್ನು ಗೂಗಲ್ ನೀಡುತ್ತದೆ. ‘who stars in it’ ಎಂದು ಪ್ರಶ್ನೆ ಕೇಳಿದ್ರೆ ಸಾಕು. ನಿಮಗೆ ಉತ್ತರ ಸಿಗಲಿದೆ.

 

ನವ ವಿವಾಹಿತೆ ಕೊಲೆಗೆ ಕಾರಣ ಕೇಳಿ ದಂಗಾದ ಪೊಲೀಸ್

$
0
0

ಮದುವೆಯಾಗಿ 9 ದಿನಗಳ ನಂತ್ರ ಪತಿಯೊಬ್ಬ ನವ ವಿವಾಹಿತೆಯನ್ನು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ನವವಿವಾಹಿತೆ ಕೊಲೆಗೆ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಕೋತ್ವಾಲಿ ಪ್ರದೇಶದಲ್ಲಿ ನಡೆದಿದೆ. 9 ದಿನಗಳ ಹಿಂದೆ ಮದುವೆ ಸಮಾರಂಭ ನಡೆದಿತ್ತು. ದೆಹಲಿ ಹುಡುಗಿಯನ್ನು ಆರೋಪಿ ಮದುವೆಯಾಗಿದ್ದ. ಪತ್ನಿಗೆ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿ ದುಷ್ಕರ್ಮಿಗಳ ಮೇಲೆ ಆರೋಪ ಹೊರಿಸಿದ್ದ.

ಪತ್ನಿ ಜೊತೆ ದೇವಸ್ಥಾನಕ್ಕೆ ಹೋದಾಗ ಬೈಕ್ ನಲ್ಲಿ ಬಂದ ಇಬ್ಬರು ಗುಂಡು ಹಾರಿಸಿದ್ದಾರೆ ಎಂದಿದ್ದ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ ಪೊಲೀಸರು ಆರೋಪಿ ಪತಿ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ವಿಚಾರಣೆ ವೇಳೆ ಪತಿ ಬಾಯ್ಬಿಟ್ಟಿದ್ದಾನೆ. ವರದಕ್ಷಿಣೆ ರೂಪದಲ್ಲಿ ನೀಡಿದ ಹಣ ಕಡಿಮೆಯಿತ್ತು. ಇದೇ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿದೆ ಎಂದಿದ್ದಾನೆ. ನವ ವಧುವಿನ ಕೊಲೆ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಪತಿ ಮೇಲಿನ ಪ್ರೀತಿಯನ್ನು ಹೀಗೆ ವ್ಯಕ್ತಪಡಿಸಿದ್ರು ಸಾಕ್ಷಿ ಧೋನಿ

$
0
0

ಐಪಿಎಲ್ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಪ್ರತಿಯೊಂದು ಪಂದ್ಯ ಹಾಗೂ ಪ್ರತಿಯೊಬ್ಬ ಆಟಗಾರರನ್ನು ಫಾಲೋ ಮಾಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಐಪಿಎಲ್ ಆಟವನ್ನು ಎಂಜಾಯ್ ಮಾಡುವವರಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಒಬ್ಬರು.

ಸಾಕ್ಷಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನ ಕಟ್ಟಾ ಅಭಿಮಾನಿ. ಚೆನ್ನೈ ಸೂಪರ್ ಕಿಂಗ್ಸ್ ನ ಪ್ರತಿ ಪಂದ್ಯವನ್ನೂ ಕ್ರೀಡಾಂಗಣಕ್ಕೆ ಬಂದು ವೀಕ್ಷಣೆ ಮಾಡ್ತಾರೆ ಸಾಕ್ಷಿ. ಈ ಬಾರಿ ಐಪಿಎಲ್ ನಲ್ಲಿ ಧೋನಿ ಅತ್ಯುತ್ತಮ ಫಾರ್ಮ್ ನಲ್ಲಿದ್ದು ಇದು ಸಾಕ್ಷಿ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪ್ಲೇ ಆಫ್ ನಲ್ಲಿ ಜಾಗ ಪಡೆಯಲು ಇನ್ನೊಂದು ಗೆಲುವು ಬೇಕಾಗಿದೆ. ಈ ಗೆಲುವಿಗೆ ಧೋನಿ ಅತ್ಯುತ್ತಮ ಫಾರ್ಮ್ ನಲ್ಲಿರುವುದು ಕಾರಣ. ಕಳೆದ ಸರಣಿಗಳಲ್ಲಿ ಧೋನಿ ಆಟ ಹೇಳಿಕೊಳ್ಳುವಷ್ಟಿರಲಿಲ್ಲ. ಈ ಬಾರಿ ಮಾತ್ರ ಧೋನಿ ಮೈದಾನದಲ್ಲಿ ಮಿಂಚುತ್ತಿದ್ದಾರೆ.

ಧೋನಿ ಆಟಕ್ಕೆ ಸಾಕ್ಷಿ ಮನಸೋತಿದ್ದಾರೆ. ಇದನ್ನು ಸಾಕ್ಷಿ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಶನಿವಾರ ನಡೆದ ಪಂದ್ಯ ವೀಕ್ಷಿಸಲು ಸಾಕ್ಷಿ ಮೈದಾನಕ್ಕೆ ಬಂದಿರಲಿಲ್ಲ. ಹಾಗಾಗಿ ಪತಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಗೆ ತನ್ನ ಬೆಂಬಲವಿದೆ ಎಂಬುದನ್ನು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ. ಧೋನಿ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬರ್ತಿದ್ದಂತೆ ಧೋನಿ ಫೋಟೋಕ್ಕೆ ಪ್ರೀತಿಯ ಸಿಂಬಲ್ ಹಾಗು ನಗುವಿನ ಸಿಂಬಲ್ ಹಾಕಿ ಪೋಸ್ಟ್ ಮಾಡಿದ್ದಾರೆ. ಸಾಕ್ಷಿ ಪ್ರೀತಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

 

ಒಬ್ಬ ವರ….ಇಬ್ಬರು ವಧು….ಖುಷಿ ಖುಷಿಯಲ್ಲಿ ತುಳಿದರು ಸಪ್ತಪದಿ…!

$
0
0

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಮೇ 2 ರಂದು ಒಂದು ಮದುವೆ ನಡೆದಿದೆ. ಈ ಮದುವೆಯ ವಿಷಯ ಈಗ ಎಲ್ಲೆಡೆ ಚರ್ಚೆಯಾಗ್ತಿದೆ. ಅಷ್ಟಕ್ಕೂ ಈ ಮದುವೆ ಚರ್ಚೆಯಾಗ್ತಿರೋದಕ್ಕೆ ಕಾರಣ ಏನು ಅಂತಿರಾ….ಈ ಮದುವೆಯಲ್ಲಿ ಇದ್ದಿದ್ದು ಒಬ್ಬ ವರ ಇಬ್ಬರು ವಧು.

ಆಶ್ಚರ್ಯ ಆಯ್ತಾ..ಹೌದು, ನಾಂದೇಡ್ ಜಿಲ್ಲೆಯ ಕೋಟ್ ಗ್ಯಾಲ್ ಗ್ರಾಮದಲ್ಲಿ ಸ್ವಂತ ಅಕ್ಕ, ತಂಗಿ ಒಬ್ಬನೇ ವರನನ್ನು ವರಿಸಿದ್ದಾರೆ. ಕೋಟಗ್ಯಾಲ್ ಗ್ರಾಮದ ಗಂಗಾಧರ್ ಶಿರಗಿರೆ ಎಂಬುವರಿಗೆ ಮೂರು ಮಂದಿ ಹೆಣ್ಣು ಮಕ್ಕಳಿದ್ದಾರೆ. ಇದ್ರಲ್ಲಿ ಮೊದಲನೇ ಮಗಳು ಮಾನಸಿಕೆ ಅಸ್ವಸ್ಥೆ. ಇನ್ನು ಎರಡನೇ ಮಗಳು ರಾಜಶ್ರೀ ಗೆ ಕೆಲ ದಿನಗಳ ಹಿಂದೆಯಷ್ಟೇ ಮದುವೆ ಫಿಕ್ಸ್ ಆಗಿತ್ತು.

ಆದ್ರೆ ರಾಜಶ್ರೀಗೆ ತನ್ನ ಅಕ್ಕ ದ್ರುಪತಾಬಾಯಿ ಮೇಲೆ ತುಂಬಾ ಪ್ರೀತಿ. ಅಕ್ಕ ಮಾನಸಿಕ ಅಸ್ವಸ್ಥೆಯಾಗಿದ್ರಿಂದ ರಾಜಶ್ರೀ ಅಕ್ಕನನ್ನ ತೀವ್ರ ಮುತುವರ್ಜಿಯಿಂದ ಮತ್ತು ಪ್ರೀತಿಯಿಂದ ನೋಡಿಕೊಳ್ತಿದ್ಲು. ಅಕ್ಕನ ಬಿಟ್ಟು ಒಂದು ಕ್ಷಣವೂ ದೂರ ಇರುವುದು ರಾಜಶ್ರೀಗೆ ಇಷ್ಟ ಇರಲಿಲ್ಲ. ಮದುವೆ ದಿನ ಹತ್ತಿರ ಬರ್ತಿದ್ದಂತೆ ರಾಜಶ್ರೀಗೆ ಅಕ್ಕನ ಬಿಟ್ಟು ಹೇಗೆ ಹೋಗೋದು ಎಂಬ ಯೋಚನೆ ಎದುರಾಯ್ತು.

ಮಾನಸಿಕ ಅಸ್ವಸ್ಥೆಯಾಗಿದ್ರಿಂದ ಆಕೆಯನ್ನು ಯಾರು ಮದುವೆಯಾಗಲ್ಲ. ಅವಳ ಮುಂದಿನ ಜೀವನ ಕಷ್ಟವಾಗುತ್ತೆ ಅಂತಾ ಯೋಚಿಸಿ, ತನ್ನ ಮದುವೆಯಾಗೋ ಹುಡುಗ ಸಾಯಿನಾಥ್ ಜೊತೆ ಈ ಬಗ್ಗೆ ಮಾತನಾಡಿದ್ಲು. ತನ್ನ ಅಕ್ಕನನ್ನು ಮದುವೆಯಾಗುವಂತೆ ಒತ್ತಾಯಿಸಿದ್ಲು. ಸಾಯಿನಾಥ್ ಗೆ ನಿರ್ಧಾರ ಕೈಗೊಳ್ಳುವುದು ಅಸಾಧ್ಯವಾಗಿತ್ತು.

ಆದ್ರೆ ರಾಜಶ್ರೀಗೆ ಅವಳ ಅಕ್ಕನ ಮೇಲಿನ ಪ್ರೀತಿ ಕಂಡು ಸಾಯಿನಾಥ್ ಈ ಮದುವೆಗೆ ಒಪ್ಪಿಕೊಂಡು ಜೊತೆಗೆ ತನ್ನ ಪೋಷಕರನ್ನು ಒಪ್ಪಿಸಿದ. ಅಂತೆಯೇ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರು ವಧುಗಳ ಹೆಸರೂ ನಮೂದಿಸಲಾಯ್ತ. ಖುಷಿ ಖುಷಿಯಲ್ಲಿ ಮೇ 2 ರಂದು ಮೂವರು ಸಪ್ತಪದಿ ತುಳಿದರು. ಆದ್ರೆ ಈ ಮದುವೆ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗ್ತಿದೆ. ಈ ಮದುವೆಯನ್ನು ಕಾನೂನು ಮಾನ್ಯ ಮಾಡುವುದಿಲ್ಲ. ಆದ್ರೆ ಇಲ್ಲಿ ಅಕ್ಕನ ಭವಿಷ್ಯಕ್ಕಾಗಿ ತಂಗಿ ತ್ಯಾಗ ನಿಜಕ್ಕೂ ಗ್ರೇಟ್.

ಸರಗಳ್ಳತನಕ್ಕೆ ಬಂದವರು ಹಲ್ಲೆ ಮಾಡಿ ಹೋದರು…!

$
0
0

ಬೆಂಗಳೂರು ಸೇಫ್ ಸಿಟಿಯಲ್ಲ ಎಂಬುದನ್ನು ಆಗಾಗ ನಡೆಯುವ ಹತ್ಯೆ, ಹಲ್ಲೆ, ಕಳ್ಳತನ, ಅತ್ಯಾಚಾರದಂತಹ ಪ್ರಕರಣಗಳು ಸಾಬೀತುಪಡಿಸುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಹಾಡಹಗಲೇ ಸರಗಳ್ಳತನಕ್ಕೆ ವಿಫಲ ಯತ್ನ ನಡೆಸಿದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಘಟನೆ ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಹಾಡಹಗಲೇ ಬೈಕ್ ನಲ್ಲಿ ಬಂದ ಇಬ್ಬರು ಆಗಂತುಕರು ಮನೆಯ ಎದುರು ಮಾತನಾಡುತ್ತ ನಿಂತಿದ್ದ ಮಹಿಳೆಯ ಸರ ಹರಿಯಲು ಮುಂದಾಗಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಆಗ ಆ ಇಬ್ಬರು ಕಳ್ಳರು ಹಿಂದಿರುಗಿ ಬಂದು ಮಹಿಳೆಯ ಮೇಲೆ ಹಲ್ಲೆ ಮಾಡಿ ಸರ ಹರಿಯಲು ಯತ್ನಿಸಿದ್ದಾರೆ. ಇದನ್ನು ಮಹಿಳೆ ವಿರೋಧಿಸಿದಾಗ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಈ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಮಹಿಳೆಯ ಮೇಲೆ ಹಲ್ಲೆ ಮಾಡುತ್ತಿದ್ದರೂ, ಆಕೆ ಕೂಗಿಕೊಂಡಿದ್ದರೂ ಅಲ್ಲಿ ಯಾರೂ ಕೂಡ ಸಹಾಯಕ್ಕೆ ಬಂದಿಲ್ಲ ಎನ್ನಲಾಗಿದೆ.


ಮತ್ತೆ ಎದುರಾಗಿದೆ ನಗದು ಬಿಕ್ಕಟ್ಟು: ಎಟಿಎಂ ಮುಂದೆ ನೋ ಕ್ಯಾಶ್ ಬೋರ್ಡ್

$
0
0

ಎರಡು ವಾರಗಳ ನಂತ್ರ ಮತ್ತೆ ದೇಶದಲ್ಲಿ ನಗದು ಸಮಸ್ಯೆ ಎದುರಾಗಿದೆ. ಈ ಬಾರಿ ಈಶಾನ್ಯ ರಾಜ್ಯಗಳ ಜನರು ನಗದು ಸಮಸ್ಯೆ ಎದುರಿಸುವಂತಾಗಿದೆ. ಅರುಣಾಚಲಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಮೇಘಾಲಯಗಳಲ್ಲಿ ಮೇ ಮೊದಲ ವಾರದಲ್ಲಿಯೇ ನಗದು ಬಿಕ್ಕಟ್ಟು ಸೃಷ್ಟಿಯಾಗಿದೆ. ಎಟಿಎಂಗಳ ಮುಂದೆ ನೋ ಕ್ಯಾಶ್ ಬೋರ್ಡ್ ನೇತಾಡುತ್ತಿದೆ. ಜನರು ಹಣಕ್ಕಾಗಿ ಪರದಾಡುವಂತಾಗಿದೆ.

ಸ್ಥಳೀಯ ಆರ್ ಬಿ ಐ ಶಾಖೆಗೆ ಹಣದ ಸರಬರಾಜು ಸರಿಯಾಗಿ ಆಗ್ತಿಲ್ಲ. ಈ ಕಾರಣಕ್ಕೆ ನಗದು ಬಿಕ್ಕಟ್ಟು ಎದುರಾಗಿದೆ ಎನ್ನಲಾಗ್ತಿದೆ. ಎಟಿಎಂನಲ್ಲಿ ಹೊಸ ನೋಟುಗಳನ್ನು ಹಾಕಬೇಕು. ಬ್ಯಾಂಕ್ ಬಳಿ ಹಳೆ ನೋಟುಗಳಿವೆ. ಹಾಗಾಗಿ ಎಟಿಎಂನಲ್ಲಿ ಕ್ಯಾಶ್ ಸಮಸ್ಯೆ ಎದುರಾಗಿದೆ.ಆರ್ ಬಿ ಐ ಗೆ ಆದಷ್ಟು ಬೇಗ ಹೊಸ ನೋಟುಗಳನ್ನು ಕಳುಹಿಸಿಕೊಡುವಂತೆ ಸೂಚನೆ ನೀಡಿದ್ದೇವೆ ಎಂದು ಎಸ್ ಬಿ ಐ ಪ್ರಾದೇಶಿಕ ವ್ಯವಸ್ಥಾಪಕರು ಹೇಳಿದ್ದಾರೆ.

ತಿಂಗಳ ಆರಂಭದಲ್ಲಿಯೇ ನಗದು ಬಿಕ್ಕಟ್ಟು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಜನರು ಬ್ಯಾಂಕ್ ಮೇಲೆ ಮುನಿಸಿಕೊಂಡಿದ್ದಾರೆ. ತಿಂಗಳ ಮಧ್ಯದಲ್ಲಿ ಪರಿಸ್ಥಿತಿ ಸರಿಯಾಗಲಿದೆ. ಈಗಾಗಲೇ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಿಗೆ ನಗದನ್ನು ಕಳುಹಿಸಿದ್ದೇವೆಂದು ಎಸ್ ಬಿ ಐ ಅಧಿಕಾರಿಗಳು ಹೇಳಿದ್ದಾರೆ.

 

ಹುಡುಗಿಯರ ನಿದ್ದೆ ಕದಿಯುತ್ತಿದೆ ಹನಿಸಿಂಗ್ ಹೊಸ ಲುಕ್

$
0
0

ಮತ್ತೆ ರ್ಯಾಪರ್ ಯೋ ಯೋ ಹನಿಸಿಂಗ್ ಸುದ್ದಿಯಲ್ಲಿದ್ದಾರೆ. ವಿಭಿನ್ನ ಹಾಡುಗಳ ಮೂಲಕ ಜನರ ಮನಗೆದ್ದಿದ್ದ ಹನಿಸಿಂಗ್ ಅನೇಕ ವರ್ಷ ಪರದೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಸೋನುಕಿ ಟಿಟು ಕಿ ಸ್ವೀಟಿ ಚಿತ್ರದ ದಿಲ್ ಚೋರಿ ಹಾಗೂ ಛೋಟಾ ಛೋಟಾ ಪೆಗ್ಸ್ ಹಾಡಿನ ಮೂಲಕ ಹನಿಸಿಂಗ್ ಜನರ ಮನಗೆದ್ದಿದ್ದಾರೆ.

ಶೀಘ್ರವೇ ದೊಡ್ಡ ಮ್ಯೂಸಿಕ್ ವಿಡಿಯೋ ಜೊತೆ ಹನಿಸಿಂಗ್ ವಾಪಸ್ ಆಗ್ತಿದ್ದಾರೆ. ಹೊಸ ವಿಡಿಯೋದ ಹನಿಸಿಂಗ್ ಹೊಸ ಲುಕ್ ವೈರಲ್ ಆಗಿದೆ. ಹನಿಸಿಂಗ್ ಹೊಸ ಲುಕ್ ಹುಬ್ಬೇರಿಸುವಂತಿದೆ. ಇದಕ್ಕಾಗಿ ಹನಿಸಿಂಗ್ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ. ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿರುವ ಹನಿಸಿಂಗ್ ಹೊಸ ವಿಡಿಯೋಗಾಗಿ ಜಿಮ್ ನಲ್ಲಿ ಕಸರತ್ತು ಮಾಡ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಹೊಸ ವಿಡಿಯೋವೊಂದರ ಶೂಟಿಂಗ್ ನಲ್ಲಿ ಬ್ಯುಸಿಯಿದ್ದೇನೆ. ಇದಕ್ಕೆ ನಮ್ಮ ದೇಹ ಬದಲಿಸಿಕೊಳ್ಳುವ ಅಗತ್ಯವಿದೆ. ದಯವಿಟ್ಟು ನಿಮ್ಮ ಪ್ರೀತಿ, ಬೆಂಬಲ ಸದಾ ನನಗಿರಲಿ ಎಂದು ಹನಿಸಿಂಗ್ ಬರೆದಿದ್ದಾರೆ.

ಖರೀದಿದಾರರಿಗೆ ಶಾಕ್ ನೀಡಿದ ಚಿನ್ನ, ಬೆಳ್ಳಿಯೂ ದುಬಾರಿ

$
0
0

ನವದೆಹಲಿ: ಚಿನ್ನದ ಬೆಲೆ ಕಡಿಮೆಯಾಗಲಿದೆ ಎನ್ನಲಾಗಿತ್ತಾದರೂ, ದೆಹಲಿಯಲ್ಲಿ ಚಿನ್ನದ ಬೆಲೆ 32,000 ರೂ. ಗಡಿಯನ್ನು ದಾಟಿದೆ. 3 ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿನ್ನ ಶನಿವಾರ ಮತ್ತೆ ಏರಿಕೆಯಾಗಿದೆ.

ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 100 ರೂ. ಜಾಸ್ತಿಯಾಗಿದ್ದು, 32,080 ರೂ. ತಲುಪಿದೆ. ಬೆಳ್ಳಿ ಬೆಲೆಯಲ್ಲಿಯೂ ಕೆ.ಜಿ.ಗೆ 200 ರೂ. ಏರಿಕೆಯಾಗಿ 40, 500 ರೂ. ತಲುಪಿದೆ. ಸ್ಥಳೀಯ ಚಿನ್ನಾಭರಣ ವರ್ತಕರು ಮತ್ತು ಖರೀದಿದಾರರ ಬೇಡಿಕೆಯಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.

ಅದೇ ರೀತಿ ನಾಣ್ಯ ತಯಾರಕರು, ಉದ್ಯಮ ವಲಯದ ಬೇಡಿಕೆ ಪರಿಣಾಮ ಬೆಳ್ಳಿ ಬೆಲೆ ಜಾಸ್ತಿಯಾಗಿದೆ.

ರಾಜ್ಯದ 22 ಮಂದಿ ಸಿ.ಎಂ. ಗಳ ಅಧಿಕಾರಾವಧಿಯ ಸಂಪೂರ್ಣ ಮಾಹಿತಿ

$
0
0

ರಾಜ್ಯದಲ್ಲಿ ಈವರೆಗೂ 22 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಮೈಸೂರು ರಾಜ್ಯದ (1973 ನವೆಂಬರ್ 1 ರಂದು ಕರ್ನಾಟಕ ರಾಜ್ಯ ನಾಮಕರಣ) ಮೊದಲ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕೆ.ಸಿ. ರೆಡ್ಡಿ 1947 ರ ಅಕ್ಟೋಬರ್ ನಿಂದ 30 ಮಾರ್ಚ್, 1952 ರ ವರೆಗೆ(4 ವರ್ಷ 157 ದಿನ) ಆಡಳಿತ ನಡೆಸಿದ್ದಾರೆ.

2 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕೆಂಗಲ್ ಹನುಮಂತಯ್ಯ 30 ಮಾರ್ಚ್, 1952 ರಿಂದ 19 ಆಗಸ್ಟ್, 1956 ರ ವರೆಗೆ(4 ವರ್ಷ 142 ದಿನ) ಆಡಳಿತ ನಡೆಸಿದ್ದಾರೆ.

3 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕಡಿದಾಳ್ ಮಂಜಪ್ಪ 19 ಆಗಸ್ಟ್, 1956 ರಿಂದ 31 ಅಕ್ಟೋಬರ್, 1956 ರ ವರೆಗೆ (73 ದಿನ) ಅಧಿಕಾರದಲ್ಲಿದ್ದರು.

4 ನೇ ಹಾಗೂ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಪಕ್ಷದ ಎಸ್. ನಿಜಲಿಂಗಪ್ಪ 2 ಬಾರಿಗೆ ಸಿ.ಎಂ. ಆಗಿದ್ದರು. 1 ನವೆಂಬರ್, 1956 ರಿಂದ 16 ಮೇ, 1958 ರ ವರೆಗೆ(1 ವರ್ಷ 197 ದಿನ) ಹಾಗೂ 21 ಜೂನ್, 1962 ರಿಂದ 28 ಮೇ, 1968 ರ ವರೆಗೆ(5 ವರ್ಷ,342 ದಿನ) ಅಧಿಕಾರದಲ್ಲಿದ್ದರು

5 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಬಸಪ್ಪ ದಾನಪ್ಪ ಜತ್ತಿ 16 ಮೇ, 1958 ರಿಂದ 9 ಮಾರ್ಚ್, 1962 ರ ವರೆಗೆ (3 ವರ್ಷ 297 ದಿನ) ಆಡಳಿತ ನಡೆಸಿದ್ದರು.

6 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಎಸ್.ಆರ್. ಕಂಠಿ 14 ಮಾರ್ಚ್ 1962 ರಿಂದ 20 ಜೂನ್ 1962 ರವರೆಗೆ(98 ದಿನ) ಆಡಳಿತವನ್ನು ನಡೆಸಿದ್ದಾರೆ.

7 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ವೀರೇಂದ್ರ ಪಾಟೀಲ್ 2 ಬಾರಿ ಸಿ.ಎಂ. ಆಗಿದ್ದರು. 29 ಮೇ 1968 ರಿಂದ 18 ಮಾರ್ಚ್, 1971 ರ ವರೆಗೆ (2 ವರ್ಷ 293 ದಿನ) ಹಾಗೂ 30 ನವೆಂಬರ್, 1989 ರಿಂದ 10 ಅಕ್ಟೋಬರ್ 1990 ರವರೆಗೆ(314 ದಿನ) ಅಧಿಕಾರದಲ್ಲಿದ್ದರು.

8 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಡಿ. ದೇವರಾಜ ಅರಸ್ 2 ಬಾರಿ ಸಿ.ಎಂ. ಆಗಿದ್ದರು 20 ಮಾರ್ಚ್, 1972 ರಿಂದ 31 ಡಿಸೆಂಬರ್, 1977 ರ ವರೆಗೆ (5 ವರ್ಷ 286 ದಿನ) ಹಾಗೂ 28 ಫೆಬ್ರವರಿ 1978 ರಿಂದ 7 ಜನವರಿ 1980 ರವರೆಗೆ(1 ವರ್ಷ 313 ದಿನ) ಅವರು ಮುಖ್ಯಮಂತ್ರಿಯಾಗಿದ್ದರು.

9 ನೇ ಮುಖ್ಯಮಂತ್ರಿಯಾಗಿ ಆರ್. ಗುಂಡೂರಾವ್ 12 ಜನವರಿ, 1980 ರಿಂದ 6 ಜನವರಿ, 1983 ರವರೆಗೆ(2 ವರ್ಷ 359 ದಿನ) ಆಡಳಿತ ನಡೆಸಿದ್ದರು.

10 ನೇ ಮುಖ್ಯಮಂತ್ರಿಯಾಗಿ ಜನತಾ ಪಕ್ಷದ ರಾಮಕೃಷ್ಣ ಹೆಗ್ಡೆ 3 ಬಾರಿ ಸಿ.ಎಂ. ಆಗಿದ್ದರು. 10 ಜನವರಿ, 1983 ರಿಂದ 29 ಡಿಸೆಂಬರ್, 1984 ರವರೆಗೆ (1 ವರ್ಷ 354 ದಿನ), 8 ಮಾರ್ಚ್, 1985 ರಿಂದ 13 ಫೆಬ್ರವರಿ, 1986 ರ ವರೆಗೆ (342 ದಿನ), 16 ಫೆಬ್ರವರಿ, 1986 ರಿಂದ 10 ಆಗಸ್ಟ್, 1988 ರ ವರೆಗೆ (2 ವರ್ಷ, 176 ದಿನ) ಆಡಳಿತ ನಡೆಸಿದ್ದಾರೆ.

11 ನೇ ಮುಖ್ಯಮಂತ್ರಿಯಾಗಿ ಜನತಾ ಪಕ್ಷದ ಎಸ್.ಆರ್. ಬೊಮ್ಮಾಯಿ 13 ಆಗಸ್ಟ್, 1988 ರಿಂದ 21 ಏಪ್ರಿಲ್, 1989 ರ ವರೆಗೆ(281 ದಿನ) ಮುಖ್ಯಮಂತ್ರಿಯಾಗಿದ್ದರು.

12 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಎಸ್. ಬಂಗಾರಪ್ಪ 17 ಅಕ್ಟೋಬರ್, 1999 ರಿಂದ 19 ನವೆಂಬರ್, 1992 ರ ವರೆಗೆ (2 ವರ್ಷ 33 ದಿನ) ಆಡಳಿತ ನಡೆಸಿದ್ದರು.

13 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಎಂ. ವೀರಪ್ಪಮೊಯ್ಲಿ 19 ನವೆಂಬರ್ 1992 ರಿಂದ 11 ಡಿಸೆಂಬರ್ 1994 ರ ವರೆಗೆ(2 ವರ್ಷ 22 ದಿನ) ಅಧಿಕಾರದಲ್ಲಿದ್ದರು.

14 ನೇ ಮುಖ್ಯಮಂತ್ರಿಯಾಗಿ ಜನತಾದಳದ ಹೆಚ್.ಡಿ. ದೇವೇಗೌಡ 11 ಡಿಸೆಂಬರ್, 1994 ರಿಂದ 31 ಮೇ, 1996 ರ ವರೆಗೆ(1 ವರ್ಷ 172 ದಿನ) ಆಡಳಿತ ನಡೆಸಿದ್ದಾರೆ.

15 ನೇ ಮುಖ್ಯಮಂತ್ರಿಯಾಗಿ ಜನತಾದಳದ ಜೆ.ಹೆಚ್. ಪಟೇಲ್ 31 ಮೇ, 1996 ರಿಂದ 7 ಅಕ್ಟೋಬರ್, 1999 ರ ವರೆಗೆ (3 ವರ್ಷ, 129 ದಿನ) ಆಡಳಿತ ನಡೆಸಿದ್ದರು

16 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಎಸ್.ಎಂ. ಕೃಷ್ಣ 11 ಅಕ್ಟೋಬರ್, 1999 ರಿಂದ 28 ಮೇ, 2004 ವರೆಗೆ(4 ವರ್ಷ 230 ದಿನ) ಅಧಿಕಾರದಲ್ಲಿದ್ದರು.

17 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಧರಂಸಿಂಗ್ 28 ಮೇ, 2004 ರಿಂದ 28 ಜನವರಿ, 2006 ರ ವರೆಗೆ (1 ವರ್ಷ 245 ದಿನ) ಆಡಳಿತ ನಡೆಸಿದ್ದರು.

18 ನೇ ಮುಖ್ಯಮಂತ್ರಿಯಾಗಿ ಜೆ.ಡಿ.ಎಸ್. ಪಕ್ಷದ ಹೆಚ್.ಡಿ. ಕುಮಾರಸ್ವಾಮಿ 3 ಫೆಬ್ರವರಿ, 2006 ರಿಂದ 8 ಅಕ್ಟೋಬರ್, 2007 ರ ವರೆಗೆ (1 ವರ್ಷ 253 ದಿನ) ಅಧಿಕಾರದಲ್ಲಿದ್ದರು.

19 ನೇ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ.ಯ ಬಿ.ಎಸ್. ಯಡಿಯೂರಪ್ಪ 2 ಬಾರಿ ಆಡಳಿತ ನಡೆಸಿದ್ದರು. 12 ನವೆಂಬರ್, 2007 ರಿಂದ 19 ನವೆಂಬರ್, 2007 ರವರೆಗೆ (7 ದಿನ), 30 ಮೇ 2008 ರಿಂದ 31 ಜುಲೈ, 2011 ರ ವರೆಗೆ (3 ವರ್ಷ, 62 ದಿನ) ಅವರು ಅಧಿಕಾರದಲ್ಲಿದ್ದರು.

20 ನೇ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ. ಯ ಡಿ.ವಿ. ಸದಾನಂದಗೌಡ 4 ಆಗಸ್ಟ್, 2011 ರಿಂದ 12 ಜುಲೈ, 2012 ರ ವರೆಗೆ(343 ದಿನ) ಆಡಳಿತ ನಡೆಸಿದ್ದರು.

21 ನೇ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ. ಯ ಜಗದೀಶ್ ಶೆಟ್ಟರ್ 12 ಜುಲೈ, 2012 ರಿಂದ 12 ಮೇ, 2013 ರ ವರೆಗೆ (304 ದಿನ) ಅಧಿಕಾರದಲ್ಲಿದ್ದರು.

22 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯ 13 ಮೇ 2013 ರಿಂದ ಅಧಿಕಾರದಲ್ಲಿದ್ದಾರೆ.

ಮಹತ್ವದ ರಾಜಕೀಯ ಬೆಳವಣಿಗೆ: ಅಂಬಿ –ಹೆಚ್.ಡಿ.ಕೆ. ಭೇಟಿ

$
0
0

ಬೆಂಗಳೂರು: ವಿಧಾನಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳಷ್ಟೇ ಉಳಿದಿರುವಾಗ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ.

ನಟ ಹಾಗೂ ಮಾಜಿ ಸಚಿವ ಅಂಬರೀಶ್ ನಿವಾಸಕ್ಕೆ ತೆರಳಿದ ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ನಾಯಕ ಹೆಚ್.ಡಿ. ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದಾರೆ. ಅಂಬರೀಶ್ ಮತ್ತು ಕುಮಾರಸ್ವಾಮಿ ಅವರ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ತಮ್ಮ ಭೇಟಿಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಅಂಬರೀಶ್ ಅವರು ಜೆ.ಡಿ.ಎಸ್. ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಹಿರಿಯ ಸಹೋದರನಂತೆ ಇರುವ ಅವರು ಹಿಂದಿನಿಂದಲೂ ನಮ್ಮ ಬಗ್ಗೆ ವಿಶ್ವಾದಿಂದ ಇದ್ದಾರೆ. ಅವರು ಜೆ.ಡಿ.ಎಸ್. ಸೇರುವ ಬಗ್ಗೆ ತೀರ್ಮಾನ ಕೈಗೊಳ್ಳವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Viewing all 90268 articles
Browse latest View live




Latest Images