
ಮುಂಬೈ: ಐಐಟಿ ಬಾಂಬೆ ಹಾಸ್ಟೇಲ್ ನ ಕ್ಯಾಂಟೀನ್ ನಲ್ಲಿ ಹಾಕಿರುವ ಪೋಸ್ಟ್ ವೊಂದು ಈಗ ವಿವಾದಕ್ಕೆ ಕಾರಣವಾಗಿದೆ. ಕ್ಯಾಂಟೀನ್ ಗೋಡೆಯಲ್ಲಿ ‘ಇಲ್ಲಿ ಸಸ್ಯಹಾರಿಗಳು ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ’ ಎಂಬ ಪೋಸ್ಟರ್ ಅಂಟಿಸಲಾಗಿದ್ದು, ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.
ಐಐಟಿ ಹಾಸ್ಟೇಲ್ ಕ್ಯಾಂಟೀನ್ ನಲ್ಲಿ ಇಲ್ಲಿ ಸಸ್ಯಹಾರಿಗಳು ಮಾತ್ರ ಕುಳಿತುಕೊಳ್ಳಬಹುದು ಎಂದು ಬೋರ್ಡ್ ಹಾಕಿರುವುದಕ್ಕೆ ಹಲವು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಆಹಾರ ತಾರತಮ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಸಂಸ್ಥೆಯ ಹಾಸ್ಟೇಲ್ 12ರ ಕ್ಯಾಂಟೀನ್ ಗೋಡೆಗೆ ಈ ಪೋಸ್ಟರ್ ಹಾಕಲಾಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಐಐಟಿ ಬಾಂಬೆ ಅಧಿಕಾರಿಯೊಬ್ಬರು, ಈ ರೀತಿ ಸಸ್ಯಯಹಾರಿಗಳು ಮಾತ್ರ ಇಲ್ಲಿ ಕುಳಿತುಕೊಳ್ಳಬಹುದು ಎಂದು ಯಾರು ಪೋಸ್ಟರ್ ಅಂಟಿಸಿದ್ದಾರೆ ಗೊತ್ತಿಲ್ಲ. ವಿವಿಧ ರೀತಿಯ ಆಹಾರ ಸೇವಿಸುವವರಿಗೆ ಇಲ್ಲಿ ಯಾವುದೇ ನಿಗದಿತ ಸ್ಥಳ ಇಲ್ಲ ಎಂದು ತಿಳಿಸಿದ್ದಾರೆ. ಒಟ್ಟಾರೆ ಕ್ಯಾಂಟೀನ್ ಪೋಸ್ಟರ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
The post IIT ಬಾಂಬೆ ಹಾಸ್ಟೇಲ್ ಕ್ಯಾಂಟೀನ್ ನಲ್ಲಿ ‘ಸಸ್ಯಹಾರಿಗಳಿಗೆ ಮಾತ್ರ’ ಬೋರ್ಡ್; ವಿವಾದಕ್ಕೆ ಕಾರಣವಾಯ್ತು ಪೋಸ್ಟರ್ first appeared on Kannada Dunia | Kannada News | Karnataka News | India News.