
ಬೀದರ್: ಮಗಳ ರಕ್ಷಕನಾಗಬೇಕಿದ್ದ ಅಪ್ಪನೇ ಪೈಶಾಚಿಕ ಕೃತ್ಯವೆಸಗಿರುವ ಘೋರ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ. ಕರ್ನಾಟಕದಲ್ಲಿ ಇಂತಹ ಹೇಯ ಕೃತ್ಯ ನಡೆದಿದ್ದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ಇಲ್ಲೋರ್ವ ತಂದೆ ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಅಜ್ಜಿಯೊಬ್ಬರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ ವೇಳೆ ತಂದೆ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಬಾಲಕಿಯ ಅಜ್ಜಿಯ ಕೈಗೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಕಳೆದ ಒಂದು ವರ್ಷದಿಂದ ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ವಿಷಯ ಬಾಯ್ಬಿಟ್ಟರೆ ಕೊಲೆಗೈಯ್ಯುವುದಾಗಿ ಮಗಳಿಗೆ ಬೆದರಿಕೆ ಹಾಕಿದ್ದ.
ಅಜ್ಜಿ ಬಸವಕಲ್ಯಾಣ ಠಾಣೆಗೆ ದೂರು ನೀಡಿದ್ದು, ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
The post SHOCKING NEWS: ತಂದೆಯಿಂದಲೇ ಮಗಳ ಮೇಲೆ ಪೈಶಾಚಿಕ ಕೃತ್ಯ first appeared on Kannada Dunia | Kannada News | Karnataka News | India News.