
ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಆಗಸ್ಟ್ 5 ರಂದು ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ ತಿಂಗಳು 200 ಯುನಿಟ್ ಉಚಿತವಾಗಿ ವಿದ್ಯುತ್ ಸಿಗಲಿದ್ದು, ಆಗಸ್ಟ್ 5 ಕ್ಕೆ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ 1 ಕೋಟಿ ನಲವತ್ತು ಲಕ್ಷ ಕುಟುಂಬಗಳು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಗೃಹಜ್ಯೋತಿ ನೋಂದಣಿಗೆ ಕೊನೆ ದಿನಾಂಕ ಇಲ್ಲವಾದರೂ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುವ ಜುಲೈ ತಿಂಗಳ ವಿದ್ಯುತ್ ಬಳಕೆಯ ಬಿಲ್ ಝೀರೋ ಬರಬೇಕಾದರೆ ಅದಕ್ಕಿಂತ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಅಂತಿಮ ಗಡುವುನೊಳಗೆ ನೋಂದಣಿ ಮಾಡದಿದ್ದರೆ ಎಂದಿನಂತೆ ರೆಗ್ಯೂಲರ್ ಬಿಲ್ ಬರುತ್ತದೆ ಎಂದರು.
The post BIGG NEWS : ಆಗಸ್ಟ್ 5 ಕ್ಕೆ `ಗೃಹಜ್ಯೋತಿ’ ಯೋಜನೆಗೆ ಚಾಲನೆ : ಇಂಧನ ಸಚಿವ ಕೆ.ಜೆ, ಜಾರ್ಜ್ first appeared on Kannada Dunia | Kannada News | Karnataka News | India News.