Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಜನಸಾಮಾನ್ಯರಿಗೆ ಮತ್ತೆ ಶಾಕ್ ಕೊಟ್ಟ `ಕೆಂಪುಸುಂದರಿ’ : ಕೆಜಿಗೆ 135 ರೂ. ತಲುಪಿದ ಟೊಮೆಟೊ!

$
0
0

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ನಡುವೆಯೇ ಟೊಮೆಟೊ ಬೆಲೆ ರಾಕೆಟ್ ವೇಗದಲ್ಲಿ ಏರಿಕೆಯಾಗಿ ಗ್ರಾಹಕರಿಗೆ ಆಘಾತ ತಂದಿದ್ದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಟೊಮೆಟೊ ಬೆಲೆ ಮತ್ತಷ್ಟು ಏರಿಕೆಯಾಗಿದೆ.

ರಾಜ್ಯದಲ್ಲಿ ಟೊಮೆಟೊ ಬೆಲೆ ಇನ್ನಷ್ಟು ಏರರಿಕೆಯಾಗಿದ್ದು, ಕೆಜಿಗೆ 135 ರೂ. ತಲುಪಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೊ ಬೆಳೆ ಹಾಳಾಗಿದ್ದು, ಮತ್ತೆ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಬಿಗ್ ಶಾಕ್ ಎದುರಾಗಿದೆ.

ರಾಜ್ಯದಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಟೊಮೆಟೊ ಬೆಳೆಗೆ ಮತ್ತೆ ಸಂಕಷ್ಟ ಎದುರಾಗಲಿದ್ದು, ಸಹಜವಾಗಿ ಬೆಲೆ ಏರಿಕೆಯಾಗಲಿದೆ. ಇನ್ನು ಕೆಲವೇ ವಾರಗಳಲ್ಲಿ ಟೊಮೆಟೊ ಬೆಳೆ ಕಟಾವಿಗೆ ಬರಲಿದೆ. ಆಗಸ್ಟ್ 2 ಅಥವಾ 3ನೇ ವಾರದಲ್ಲಿ ಟೊಮೆಟೊ ಬೆಳೆ ಕಟಾವು ಆರಂಭವಾಗಲಿದೆ. ಆದರೆ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿರುವುದರಿಂದ ಬೆಳೆ ನಾಶವಾಗುವ ಆತಂಕವಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಕ್ವಿಂಟಲ್ ಟೊಮೆಟೊ ಬೆಲೆ 8000 ರೂಪಾಯಿ ಇದೆ. ಕೆಜಿಗೆ 120-135 ರೂಪಾಯಿ ಇದೆ. ಇನ್ನು ಆಗಸ್ಟ್ ತಿಂಗಳಲ್ಲಿ ವರುಣಾರ್ಭಟ ಹೆಚ್ಚಾಗಲಿದ್ದು, ಈ ವೇಳೆ ಕಟಾವಿಗೆ ಬಂದ ಟೊಮೆಟೊವನ್ನು ಮಾರುಕಟ್ಟೆಗೆ ಪೂರೈಕೆಯೂ ಕಷ್ಟಕರವಾಗಲಿದೆ. ಇದರಿಂದ ಟೊಮೆಟೊ ಬೆಲೆ ಮತ್ತಷ್ಟು ಗಗನಮುಖಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

The post ಜನಸಾಮಾನ್ಯರಿಗೆ ಮತ್ತೆ ಶಾಕ್ ಕೊಟ್ಟ `ಕೆಂಪುಸುಂದರಿ’ : ಕೆಜಿಗೆ 135 ರೂ. ತಲುಪಿದ ಟೊಮೆಟೊ! first appeared on Kannada Dunia | Kannada News | Karnataka News | India News.

Viewing all articles
Browse latest Browse all 103032

Trending Articles