ಬುಂದಿ: ಹೆಣ್ಣುಮಕ್ಕಳ ಮೇಲೆ ಸಂಬಂಧಿಕರು, ಪರಿಚಯಸ್ಥರಿಂದಲೇ ದೌರ್ಜನ್ಯ ಹೆಚ್ಚಾಗಿ ನಡೆಯುತ್ತದೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ.
ಬುಡಕಟ್ಟು ಸಮುದಾಯಕ್ಕೆ ಸೇರಿದ 19 ವರ್ಷದ ಯುವತಿಯನ್ನು ಆಕೆಯ ಸಂಬಂಧಿಯೇ 1.50 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಘಟನೆ ರಾಜಸ್ತಾನದ ಗುಡ್ಡಗಾಡು ಪ್ರದೇಶ ಬುಂದಿಯಲ್ಲಿ ನಡೆದಿದೆ. ಬುರಾನ್ ಜಿಲ್ಲೆಯ 19 ವರ್ಷದ ಯುವತಿಯನ್ನು ಆಕೆಯ ಬಂಧುವಾದ ಧರ್ಮಾವತಿ ಎಂಬಾಕೆ 37 ವರ್ಷದ ಶಂಕರ್ ಲಾಲ್ ಎಂಬುವವನಿಗೆ ಮಾರಾಟ ಮಾಡಿದ್ದಳು. ಆತ ಈಕೆಯನ್ನು ಮನೆಯೊಂದರಲ್ಲಿ ಕೂಡಿಹಾಕಿ ಹಿಂಸೆ ನೀಡಿದ್ದಾನೆ.
ಯುವತಿ ಅನೇಕ ಬಾರಿ ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದಾಳೆ. ಕೊನೆಗೆ ಈ ವಿಚಾರ ಪೊಲೀಸರಿಗೆ ಗೊತ್ತಾಗಿ ಬಂಧನದಲ್ಲಿದ್ದ ಯುವತಿಯನ್ನು ಪಾರು ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪಿತರನ್ನು ಬಂಧಿಸಲಾಗಿದೆ.