ಸಾಕಷ್ಟು ವಿವಾದಗಳಿಂದ ಕೂಡಿರುವ ರಿಯಾಲಿಟಿ ಶೋ ‘ಬಿಗ್ ಬಾಸ್’ ಮತ್ತೆ ಬರ್ತಿದೆ. ಹಿಂದಿ ಚಾನೆಲ್ ಕಲರ್ಸ್ ನಲ್ಲಿ ಅಕ್ಟೋಬರ್ 16 ರಿಂದ ‘ಬಿಗ್ ಬಾಸ್’ ಸೀಸನ್ 10 ಶುರುವಾಗಲಿದೆ. ಇದಕ್ಕೂ ಮುನ್ನ ‘ಬಿಗ್ ಬಾಸ್’ ಗೆ ಸಂಬಂಧಿಸಿದ ಕೆಲವೊಂದು ಆಶ್ವರ್ಯಕರ ವಿಷಯಗಳು ಬಹಿರಂಗವಾಗಿವೆ.
ಸಾಮಾನ್ಯವಾಗಿ ‘ಬಿಗ್ ಬಾಸ್’ ಮನೆ ತುಂಬಾ ಕ್ಯಾಮರಾವನ್ನು ಅಳವಡಿಸಿರಲಾಗುತ್ತೆ. ಕ್ಯಾಮರಾ ಮುಂದೆ ಏನು ನಡೆಯುತ್ತೆ ಎಂಬುದನ್ನು ಪ್ರೇಕ್ಷಕ ಆರಾಮವಾಗಿ ನೋಡಬಹುದು. ಆದ್ರೆ ಕ್ಯಾಮರಾ ಹಿಂದಿನ ಘಟನೆಗಳು ಮಾತ್ರ ಸ್ಪರ್ಧಿಗಳು ಹಾಗೂ ನಿರ್ಮಾಣ ತಂಡಕ್ಕೆ ಮಾತ್ರ ಗೊತ್ತಿರುತ್ತೆ.
ಹಳೆಯ ಸ್ಪರ್ಧಿಗಳ ಜೊತೆ ಪತ್ರಿಕೆಯೊಂದು ನಡೆಸಿದ ಸಂದರ್ಶನದಲ್ಲಿ ಕೆಲವೊಂದು ಆಶ್ಚರ್ಯ ಹುಟ್ಟಿಸುವಂತಹ ವಿಷಯಗಳು ಹೊರ ಬಿದ್ದಿವೆ. ಸಾಮಾನ್ಯವಾಗಿ ಬಾತ್ ರೂಂನಲ್ಲಿ ಕ್ಯಾಮರಾ ಇರೋದಿಲ್ಲ. ಹಾಗಾಗಿಯೇ ಇದು ಸ್ಪರ್ಧಿಗಳ ಖಾಸಗಿ ಸ್ಥಳವಾಗಿ ಮಾರ್ಪಟ್ಟಿರುತ್ತಂತೆ. ಇಲ್ಲಿ ಶಾರೀರಿಕ ಸಂಬಂಧ ಬೆಳೆಸ್ತಾರಂತೆ ಸ್ಪರ್ಧಿಗಳು. ಬಾತ್ ರೂಂನಲ್ಲಿ ಮೈಕ್ರೋ ಮೈಕ್ ಹಾಕಿರ್ತಾರೆ. ಹಾಗಾಗಿ ನಲ್ಲಿಯಲ್ಲಿ ನೀರು ಬಿಟ್ಟುಕೊಂಡು ಒಂದಾಗ್ತಾರಂತೆ ಸ್ಪರ್ಧಿಗಳು. ಹಿಂದಿನ ಬಾರಿಯ ‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ವಿವೇಕ್ ಮಿಶ್ರಾ ಕೂಡ ‘ಬಿಗ್ ಬಾಸ್’ ನಿಂದ ಹೊರಬಂದ ನಂತ್ರ ಈ ವಿಷಯವನ್ನು ಹೇಳಿದ್ದ.
‘ಬಿಗ್ ಬಾಸ್’ ನಲ್ಲಿ ಮದ್ಯ ನಿಷಿದ್ಧ. ಮನೆಯೊಳಗೆ ಯಾರೂ ಡ್ರಿಂಕ್ ಮಾಡುವಂತಿಲ್ಲ. ಆದ್ರೆ ದೊಡ್ಡ ದೊಡ್ಡ ಸ್ಟಾರ್ ಗಳು ಇದ್ರಲ್ಲಿ ಪಾಲ್ಗೊಳ್ತಾರೆ. ಕೆಲವರಿಗೆ ಡ್ರಿಂಕ್ಸ್ ಇಲ್ಲ ಅಂದ್ರೆ ಆಗೋದಿಲ್ಲ. ಹಾಗಾಗಿ ಅವರಿಗೆ ಜ್ಯೂಸ್ ಪ್ಯಾಕ್ ನಲ್ಲಿ ಹಾಟ್ ಡ್ರಿಂಕ್ ಕಳುಹಿಸಲಾಗುತ್ತಂತೆ.