ಜಾರ್ಜಿಯಾ: ಮಕ್ಕಳು ಲವ್ ನಲ್ಲಿ ಬಿದ್ದಾಗ, ಕೆಲವೊಮ್ಮೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ, ಸಿಟ್ಟು ಮಾಡುತ್ತಾರೆ. ಹೀಗೆ ಸಿಟ್ಟಿನಲ್ಲಿ ಏನೆಲ್ಲಾ ಯಡವಟ್ಟು ಮಾಡುತ್ತಾರೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಂತಿದೆ.
ಪುತ್ರಿ ಬಾಯ್ ಫ್ರೆಂಡ್ ನೊಂದಿಗೆ ಕಾರಿನಲ್ಲಿ ಸುತ್ತಾಡಿದ್ದರಿಂದ ಸಿಟ್ಟಾದ ಅಪ್ಪನೊಬ್ಬ, ಆಡಿ ಕಾರನ್ನು ಜಖಂಗೊಳಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಜಾರ್ಜಿಯಾದಲ್ಲಿ ಸಿಟ್ಟಿನಿಂದ ತಂದೆಯೊಬ್ಬ ದುಬಾರಿ ಬೆಲೆಯ ಆಡಿ ಕಾರ್ ಹಾಳು ಮಾಡಿದ್ದಾನೆ. ಮಗಳು ಎಷ್ಟು ಹೇಳಿದರೂ ಕೇಳದೇ ಬಾಯ್ ಫ್ರೆಂಡ್ ಜೊತೆಗೆ ಕಾರಿನಲ್ಲಿ ಸುತ್ತಾಡಿದ್ದಾಳೆ. ಇದರಿಂದ ಸಿಟ್ಟಾದ ಅಪ್ಪ ಕಾರನ್ನು ಕಸ ತೆಗೆಯುವ ಯಂತ್ರದಿಂದ ಆಡಿ ಕಾರನ್ನು ಜಖಂಗೊಳಿಸಿದ್ದಾನೆ.
ಇದನ್ನು ಆತನ ಮಗ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ಅದಕ್ಕೆ ಕೆಲವರು ಸಣ್ಣ ವಿಚಾರಕ್ಕೆ ದುಬಾರಿ ಕಾರ್ ಹಾಳು ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ಕೆಲವರು ಕೋಪದಲ್ಲಿ ಮಾಡಿದ್ದು, ಸರಿಯಾಗಿದೆ ಎಂದಿದ್ದಾರೆ.