ನವದೆಹಲಿ: ಒಲಿಂಪಿಕ್ಸ್ ನಲ್ಲಿ ಭಾರತದ ಹೆಣ್ಣುಮಕ್ಕಳು ಸಾಧನೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಸಾಧನೆ ಮಾಡಲು ಈಗಿನಿಂದಲೇ ಯೋಜನೆ ರೂಪಿಸುವುದಾಗಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಾಕಿ ಆಟಗಾರ್ತಿಯರನ್ನು ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ. ಒಲಿಂಪಿಕ್ಸ್ ನಿಂದ ವಾಪಸ್ ಆದ ಕೆಲವು ಆಟಗಾರ್ತಿಯರು ರಾಂಚಿಯಿಂದ ರೂರ್ಕೆಲಾಗೆ ಬೊಕಾರೋ-ಅಲೆಪ್ಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಟಿಕೆಟ್ ಇದ್ದರೂ, ಸೀಟ್ ಖಾತ್ರಿಯಾಗದ ಕಾರಣ ಆಟಗಾರ್ತಿಯರು ಕೆಳಗೆ ಕುಳಿತೇ ಪ್ರಯಾಣಿಸಿದ್ದಾರೆ.
ಟಿಕೆಟ್ ತಪಾಸಣೆ ಮಾಡಿದ ಟಿ.ಟಿ.ಗಳು ಕೂಡ ಸ್ಪಂದಿಸಿಲ್ಲ. ಈ ಬಗ್ಗೆ ಪಂಪೋಶ್ ಉಪ ಕಲೆಕ್ಟರ್ ಹಿಮಾಂಶು ಶೇಖರ್ ಪ್ರತಿಕ್ರಿಯೆ ನೀಡಿದ್ದು, ಒಲಿಂಪಿಕ್ಸ್ ಮುಗಿಸಿ ಊರಿಗೆ ವಾಪಸ್ ಆಗುತ್ತಿದ್ದ ಆಟಗಾರ್ತಿಯರಿಗೆ ಅವಮಾನ ಮಾಡಲಾಗಿದೆ. ರೈಲ್ವೇ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.