ಮೈಸೂರು: ಮೈಸೂರು ವಿಶ್ವವಿದ್ಯಾಲಯದ ವೆಬ್ ಸೈಟ್ ಹ್ಯಾಕ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರೊಡಿಂಗ್ ಟಿ.ಎನ್. ಸೈಬರ್ ನಿಂದ ವೆಬ್ ಸೈಟ್ ಹ್ಯಾಕ್ ಮಾಡಿ ಸಂದೇಶವೊಂದನ್ನು ಪ್ರಕಟಿಸಲಾಗಿದ್ದು, ಅದನ್ನು ಸರಿಪಡಿಸಲಾಗಿದೆ.
ಹ್ಯಾಕ್ ಮಾಡಿ ಹೋಮ್ ಪೇಜ್ ನಲ್ಲಿ, ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು, ಬರ್ಮಾ ಮುಸ್ಲಿಮರನ್ನು ರಕ್ಷಿಸಬೇಕೆಂದು ಹೇಳಲಾಗಿದೆ. ಅಲ್ಲದೇ, ಇಸ್ಲಾಮ್ ಒಂದೇ ಧರ್ಮ ಎಂದು ಕೂಡ ಸಂದೇಶ ಬರೆಯಲಾಗಿದ್ದು, ಇದು ಗಮನಕ್ಕೆ ಬರುತ್ತಲೇ ವಿಶ್ವವಿದ್ಯಾಲಯದ ತಾಂತ್ರಿಕ ಸಿಬ್ಬಂದಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಸಂಘಟನೆಯತ್ತ ಸೆಳೆಯಲು ಈ ರೀತಿ ಹ್ಯಾಕ್ ಮಾಡಿರುವ ಸಾಧ್ಯತೆಯಿದೆ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ವೆಬ್ ಸೈಟ್ ಹ್ಯಾಕ್ ಮಾಡಿ, ಬರ್ಮಾ ಮುಸ್ಲಿಮರನ್ನು ರಕ್ಷಿಸಿ ಎಂದು ಹೋಮ್ ಪೇಜ್ ನಲ್ಲಿ ಸಂದೇಶ ಹಾಕಿರುವ ಬಗ್ಗೆ ಗಮನಕ್ಕೆ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗಿದೆ ಎಂದು ವಿವಿ ಪ್ರಮುಖರು ತಿಳಿಸಿದ್ದಾರೆ.