ಇಸ್ರೇಲ್ ನ ಕಲಾವಿದ ಸಿಗಲಿತ್ ಲಂಡೌ, 19ರ ದಶಕದ ಕಪ್ಪು ಬಣ್ಣದ ಗೌನ್ ಒಂದನ್ನು ‘ಮೃತ್ಯು ಸಮುದ್ರ’ದಲ್ಲಿ ಮುಳುಗಿಸಿ ಇಟ್ಟಿದ್ರು.
ಡೆಡ್ ಸೀ ಅನ್ನು ಅತ್ಯಂತ ಉಪ್ಪು ನೀರುಳ್ಳ ಸಮುದ್ರ ಅಂತಾ ಕರೆಯಲಾಗುತ್ತದೆ. 2 ತಿಂಗಳ ನಂತರ ಕಪ್ಪು ಸೂಟನ್ನು ಉಪ್ಪು ನೀರಿದ ಹೊರತೆಗೆದು ನೋಡಿದ್ರೆ ಅಲ್ಲಿ ಚಮತ್ಕಾರವೇ ಆಗಿತ್ತು. ಕಪ್ಪು ಸೂಟ್ ಬೆಳ್ಳಗಿನ ಸ್ಫಟಿಕಗಳಿಂದ ಫಳ ಫಳನೆ ಹೊಳೆಯುತ್ತಿತ್ತು.
ಗೌನ್ ಮೇಲೆಲ್ಲ ಕುಳಿತಿದ್ದ ಉಪ್ಪಿನ ಹರಳುಗಳಿಂದಾಗಿ ಆ ಧಿರಿಸಿಗೆ ಹೊಸ ಲುಕ್ ಸಿಕ್ಕಿತ್ತು. 1916ರಲ್ಲಿ ಬಿಡುಗಡೆಯಾದ Dybbuk ಚಿತ್ರದ ನಾಯಕಿಯ ಗೌನ್ ಕೂಡ ಇದೇ ರೀತಿಯಾಗಿದೆ. ಅದರಿಂದಲೇ ಪ್ರೇರಿತವಾದ ಅಂದದ ಗೌನ್ ಇದು. ದಿ ಸಾಲ್ಟ್ ಬ್ರೈಡ್ ಸಿರೀಸ್ ನಲ್ಲಿ ಕೂಡ ಇದೇ ರೀತಿಯ 8 ಬಣ್ಣದ ಗೌನ್ ಗಳನ್ನು ಬಳಸಲಾಗಿದೆ. ಸದ್ಯ ಡೆಡ್ ಸೀ ನಲ್ಲಿ ಹೊಸ ರೂಪ ಪಡೆದ ಈ ಅದ್ಭುತ ಗೌನ್ ಅನ್ನು ಲಂಡನ್ ನ ಮಾಲ್ಬೊರೋ ಕಂಟೆಂಪರರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.