ಸಾಮೂಹಿಕ ಅತ್ಯಾಚಾರ, ಮರ್ಯಾದಾ ಹತ್ಯೆಯಂತಹ ಪ್ರಕರಣಗಳಿಂದ ಹರಿಯಾಣ ಸುದ್ದಿಯಲ್ಲಿರುವಾಗಲೇ 29 ವರ್ಷದ ರೈತನೊಬ್ಬ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾನೆ. ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆಯೊಬ್ಬಳನ್ನು ಮದುವೆಯಾಗಿದ್ದಾನೆ.
ಜಿಂದ್ ಜಿಲ್ಲೆಯ ಛತರ್ ಗ್ರಾಮದ ನಿವಾಸಿ ಜಿತೇಂದರ್, 2015ರ ಡಿಸೆಂಬರ್ 4ರಂದು ಅತ್ಯಾಚಾರ ಸಂತ್ರಸ್ಥೆಯನ್ನು ವಿವಾಹವಾಗಿದ್ದು, ಇಬ್ಬರೂ ಸಂತೋಷದಿಂದ ಬಾಳ್ವೆ ಮಾಡುತ್ತಿದ್ದಾರೆ. ಕೇವಲ ಆಕೆಗೆ ಬಾಳು ಕೊಟ್ಟಿರುವುದು ಮಾತ್ರವಲ್ಲ, ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೂ ಸಾಥ್ ಕೊಟ್ಟಿದ್ದಾನೆ.
ಇದುವರೆಗೂ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸುವಂತೆ ಮನವಿ ಮಾಡಲು ಜಿತೇಂದರ್ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿದ್ದಾನೆ. ಒಬ್ಬ ವಕೀಲೆಯಾಗಿ ತನ್ನ ಪತ್ನಿ ಅತ್ಯಾಚಾರ ಸಂತ್ರಸ್ಥೆಯರಿಗೆ ನೆರವಾಗಬಹುದು, ಇದಕ್ಕಾಗಿಯೇ ಯೂತ್ ಅಗೇನಸ್ಟ್ ರೇಪ್ ಎಂಬ ವೇದಿಕೆಯೊಂದನ್ನು ಕೂಡ ಸ್ಥಾಪಿಸಿರೋದಾಗಿ ಜಿತೇಂದರ್ ತಿಳಿಸಿದ್ದಾನೆ.