ಕ್ರಿಕೆಟ್ ನಂತ್ರ ರಾಜಕಾರಣಿಯಾಗಿರುವ ಸಂಸದ ಸಚಿನ್ ತೆಂಡೂಲ್ಕರ್ ‘ಸಂಸದ ಆದರ್ಶ್ ಗ್ರಾಮ ಯೋಜನೆ’ ಯಡಿ ಇನ್ನೊಂದು ಗ್ರಾಮವನ್ನು ದತ್ತು ಪಡೆದಿದ್ದಾರೆ. 2019 ರವರೆಗೆ ಈ ಗ್ರಾಮದ ಅಭಿವೃದ್ಧಿಯ ಹೊಣೆಯನ್ನು ಹೊರಲಿದ್ದಾರೆ.
ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ದೋಂಜಾ ಹಳ್ಳಿಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದತ್ತು ಪಡೆದಿದ್ದಾರೆ. ಇದಕ್ಕಿಂತ ಮೊದಲು ಆಂಧ್ರ ಪ್ರದೇಶದ puttamraju kandrika ಹಳ್ಳಿಯನ್ನು ಸಚಿನ್ ದತ್ತು ಪಡೆದಿದ್ದರು.
ಒಸ್ಮಾನಾಬಾದ್ ಜಿಲ್ಲಾ ಪರಿಷತ್ ಸಿಇಓ, ಸಚಿನ್ ನಿರ್ಧಾರಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ದೋಂಜಾ ಗ್ರಾಮವನ್ನು ಸಚಿನ್ ದತ್ತು ಪಡೆದಿರುವುದು ಖುಷಿಯ ವಿಚಾರ. ಈ ಗ್ರಾಮದ ಅಭಿವೃದ್ಧಿ ಅಕ್ಕಪಕ್ಕದ ಗ್ರಾಮಗಳಿಗೆ ಮಾದರಿಯಾಗಲಿವೆ ಎಂದು ಸಿಇಓ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಸ್ಮಾನಾಬಾದ್ ಜಿಲ್ಲೆಯ ದೋಂಜಾ ಗ್ರಾಮದಲ್ಲಿ 582 ಕುಟುಂಬಗಳು ವಾಸವಾಗಿವೆ. 1508 ಪುರುಷರು ಮತ್ತು 1355 ಮಹಿಳೆಯರು ವಾಸವಾಗಿದ್ದಾರೆ. ಒಂದರಿಂದ ಆರು ವರ್ಷದೊಳಗಿನ ಮಕ್ಕಳ ಸಂಖ್ಯೆ 319. 2011 ರ ಜನಗಣತಿ ಪ್ರಕಾರ ಸಾಕ್ಷರತೆ ಸಂಖ್ಯೆ ಶೇಕಡಾ 72.17 ರಷ್ಟಿದೆ. ಅದ್ರಲ್ಲಿ ಪುರುಷರು ಶೇಕಡಾ 78.75 ರಷ್ಟು ಶಿಕ್ಷಿತರಿದ್ದರೆ ಮಹಿಳೆಯರ ಸಂಖ್ಯೆ 64.84 ರಷ್ಟಿದೆ.