Quantcast
Channel: Latest News | Kannada Dunia | Kannada News | Karnataka News | India News
Viewing all 89094 articles
Browse latest View live

ಟಿಪ್ಸಿ ಈ ವರ್ಷದ ನ್ಯೂಜಿಲೆಂಡ್ ವರ್ಷದ ಪಕ್ಷಿ

0
0

ನ್ಯೂಜಿಲೆಂಡ್ ನ ಈ ಬಾರಿ ವರ್ಷದ ಪಕ್ಷಿಯನ್ನಾಗಿ “ಟಿಪ್ಸಿ” ಯನ್ನು ಕಿವೀಸ್ ಮಂದಿ ಆಯ್ಕೆ ಮಾಡಿದ್ದು, ಇದೀಗ ನ್ಯೂಜಿಲೆಂಡ್‌ ಪಾರಿವಾಳಕ್ಕೆ ಶುಭಾಶಯದ ಸುರಿಮಳೆ ಶುರುವಾಗಿದೆ‌.

ಪರಿವಾಳ‌ ಪ್ರಭೇದದ ಟಿಪ್ಸಿಯನ್ನು ನ್ಯೂಜಿಲೆಂಡ್ ಪಾರಿವಾಳ ಅಥವಾ ಕೆರೆರೂ ಎಂಬ ಹೆಸರಲ್ಲಿ ಕರೆಯುತ್ತಾರೆ. ಪಾರಿವಾಳಕ್ಕಿಂತ ದೊಡ್ಡ ಗಾತ್ರದಲ್ಲಿರುವ ಈ ಪಕ್ಷಿ ಹೆಚ್ಚು ಸಮಯ ಮಂಪರಿನಲ್ಲಿರುತ್ತದೆ.‌ ಮಾಗಿದ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ, ಕೆಲವೊಮ್ಮೆ ಮರದಿಂದಲೂ ಪಕ್ಷಿ‌ ಬಿದ್ದಿರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ನ್ಯೂಜಿಲೆಂಡ್ ನ ಉಳಿದಿರುವ ಸ್ಥಳೀಯ ಪಕ್ಷಿಗಳಲ್ಲಿ ಇದು ಒಂದಾಗಿದ್ದು, 2018ರ ವರ್ಷದ ಪಕ್ಷಿಯಾಗಿ ಆಯ್ಕೆಯಾಗಲು ನಡೆಸಿದ ನಾಮಿನೇಷನ್ ನಲ್ಲಿ ನ್ಯೂಜಿಲೆಂಡ್ ಮಂದಿ ಇದನ್ನು ಆಯ್ಕೆ ಮಾಡಿದ್ದಾರೆ.

ಈ‌ ವರ್ಷದ ಪಕ್ಷಿಯ ಅಭಿಯಾನವನ್ನು ಪ್ರಮಖವಾಗಿ ಪಕ್ಷಿಗಳ ಸಂರಕ್ಷಣೆ ಹಾಗೂ ಅವು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾಡಲಾಗುತ್ತಿದೆ. ಈ ಭಾರಿಯ‌ ರಾಯಭಾರಿಯಾಗಿ ನಟ ಸ್ಟೀಫನ್ ಫ್ರೈ, ಹಾಸ್ಯ ನಟ ಬಿಲ್ ಬೇಲಿ ಪ್ರಚಾರ ನಡೆಸಿದ್ದರು. ಪ್ರಶಸ್ತಿ‌ ಮುಡಿಗೇರಿಸಿಕೊಂಡ ಟಿಪ್ಸಿಗೆ ನ್ಯೂಜಿಲೆಂಡ್ ಪ್ರಧಾನಿ ಜಸ್ಸಿಂಡಾ ಅರ್ಡೆನ್ ಅಭಿನಂದಿಸಿದ್ದಾರೆ.


ಪಿಜ್ಜಾ ಆಸೆ ತೋರಿಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

0
0

ಹತ್ತನೇ ತರಗತಿಯ ವಿದ್ಯಾರ್ಥಿನಿಗೆ ಪಿಜ್ಜಾ ಕೊಡಿಸುವುದಾಗಿ ಆಮಿಷವೊಡ್ಡಿ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ವಿನೋಬಾನಗರ ಪ್ರದೇಶದಲ್ಲಿ ನೆಲೆಸಿರುವ ಮನೆ ಮಾಲಿಕರೊಬ್ಬರ ಪುತ್ರ ಆರೋಪಿಯಾಗಿದ್ದು, ಆತ ಪಿಜ್ಜಾ ಕೊಡಿಸುವುದಾಗಿ ಶುಕ್ರವಾರ ಬಾಲಕಿಯನ್ನು ತನ್ನ ಮನೆಯೊಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅದಾಗಲೇ ಮನೆಯಲ್ಲಿ ಪಾನಮತ್ತರಾಗಿದ್ದ ಮೂವರು ಗೆಳೆಯರೊಂದಿಗೆ ಸೇರಿ ಆತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಂತರ ನಡೆದ ಘಟನೆಯನ್ನು ಯಾರ ಬಳಿಯೂ ಹೇಳದಂತೆ ಆರೋಪಿಗಳು ಬಾಲಕಿಯನ್ನು ಬೆದರಿಸಿ ಕಳುಹಿಸಿಕೊಟ್ಟಿದ್ದರು.

ಸಂಜೆ ತಾಯಿ ಕೆಲಸದಿಂದ ಮನೆಗೆ ಮರಳಿದ ಬಳಿಕ ಬಾಲಕಿ ಎಲ್ಲ ವಿಚಾರವನ್ನು ಹೇಳಿದ್ದಳು. ನಂತರ ತಾಯಿ-ಮಗಳು ಇಬ್ಬರೂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಆ ಮೇರೆಗೆ ಕ್ರಮಕೈಗೊಂಡ ಪೊಲೀಸರು 28 ವರ್ಷದ ಯುವಕ ಸೇರಿ ನಾಲ್ವರು ಆರೋಪಿಗಳನ್ನೂ ಅದೇ ದಿನ ಬಂಧಿಸಿದ್ದಾರೆ.

ವಾಟ್ಸಾಪ್ ನಿಂದ ಬೀದಿ ನಾಟಕ ಪ್ರದರ್ಶನ

0
0

ದೇಶದಲ್ಲಿ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚುತ್ತಿರುವ ಸುಳ್ಳು ಸುದ್ದಿಗಳ‌ ಹರಡುವಿಕೆಯನ್ನು ತಡೆಗಟ್ಟಲು ವಾಟ್ಸಾಪ್ ಬೀದಿ ನಾಟಕದ ಮೊರೆ ಹೋಗಿದೆ.

ದೇಶದಲ್ಲಿ ಅತಿ ಹೆಚ್ಚು‌ ಜನರು ಬಳಸುತ್ತಿರುವ ಮೆಸೆಂಜರ್ ಆ್ಯಪ್ ಆಗಿರುವ ವಾಟ್ಸಾಪ್ ನಲ್ಲಿ ಸುಳ್ಳು ಹಾಗೂ ಪ್ರಚೋದನಾಕಾರಿ ಸಂದೇಶ ಸೃಷ್ಟಿಯಾಗುವ ಹಾಗೂ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಬೀದಿ ನಾಟಕಗಳನ್ನು ಆಯೋಜಿಸಿದ್ದು, ಇದರ ಮೊದಲ ಪ್ರದರ್ಶನ ಜೈಪುರದಲ್ಲಿ ನಡೆದಿದೆ.

ವಾಟ್ಸಾಪ್ ಚಿಹ್ನೆ ಇರುವ ಲಾರಿಯೊಂದರಲ್ಲಿ ಐದು ಕಲಾವಿದರಿಂದ ಬೀದಿ ನಾಟಕ ಆರಂಭವಾಗಿದೆ. ವಾಟ್ಸಾಪ್ ನಲ್ಲಿ ಯಾವ ರೀತಿ ಸುಳ್ಳು ಸುದ್ದಿ ಹರಡುತ್ತಿದೆ, ಇದರಿಂದಾಗುವ ತೊಂದರೆ ಬಗ್ಗೆ ಒಬ್ಬ ಹೇಳಿದರೆ ಇನ್ನೊಬ್ಬ ಪಾತ್ರಧಾರಿ ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ಟೀಕಿಸಿದ್ದಾನೆ. ಮುಂದಿನ ದಿನದಲ್ಲಿ ದೇಶದ ವಿವಿಧ ಭಾಗದಲ್ಲಿ ಈ‌ ನಾಟಕವನ್ನು ಆಯೋಜಿಸಲಾಗಿದೆ ಎಂದಿದ್ದಾರೆ.

ಕೇಂದ್ರ ಸರಕಾರದ ಸತತ ಒತ್ತಡದಿಂದ ಸುಳ್ಳು‌ ಸುದ್ದಿ ನಿಯಂತ್ರಣಕ್ಕೆ ಮುಂದಾಗಿರುವ ವಾಟ್ಸಾಪ್ ನ ಈ ಅಭಿಯಾನಕ್ಕೆ ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋ ಸಂಸ್ಥೆಯೂ ಕೈಜೋಡಿಸಿದೆ. ಈ‌ ಅಭಿಯಾನಕ್ಕೆ ಎಷ್ಟು ಹಣ ವಿನಿಯೋಗಿಸಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.

ಮಂಗಳವಾರ ಹೀಗೆ ಮಾಡುವುದರಿಂದ ಶೀಘ್ರ ದೂರವಾಗುತ್ತೆ ಕಷ್ಟ

0
0
12_12_2016-hanumanji

ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವ ದೇವರು ಹನುಮಂತ. ಶ್ರೀರಾಮನ ಭಕ್ತ ಹನುಮಂತನ ಬಗ್ಗೆ ತಿಳಿಯದವರಿಲ್ಲ. ಶನಿವಾರ ಹಾಗೂ ಮಂಗಳವಾರ ಹನುಮಂತನಿಗೆ ಪೂಜೆ ಮಾಡುವುದು ಸರ್ವಶ್ರೇಷ್ಠ ಎಂದು ಭಾವಿಸಲಾಗಿದೆ. ನೆಮ್ಮದಿಯ ಜೀವನ ಬಯಸುವವರು ಶ್ರದ್ಧೆ, ಭಕ್ತಿಯಿಂದ ಹನುಮಂತನ ಪೂಜೆ ಮಾಡಿದ್ರೆ ಸಾಕು.

ಸರ್ವ ಸುಖ, ಗೌರವಗಳಿಗಾಗಿ ಮಂಗಳವಾರ ವೃತ ಮಾಡುವುದು ಬಹಳ ಉತ್ತಮ. ಈ ವೃತದಲ್ಲಿ ಗೋಧಿ ಹಾಗೂ ಬೆಲ್ಲವನ್ನು ಮಾತ್ರ ಸೇವನೆ ಮಾಡಬೇಕು. ರಾತ್ರಿ ಮಾತ್ರ ಭೋಜನ ಮಾಡಬೇಕು. 21 ವಾರಗಳ ಕಾಲ ಈ ವೃತವನ್ನು ಮಾಡಬೇಕಾಗುತ್ತದೆ. ಈ ವೃತದಿಂದ ಮನುಷ್ಯ ಮಾಡಿದ ಎಲ್ಲ ದೋಷಗಳೂ ನಷ್ಟವಾಗುತ್ತವೆ.

ವೃತದ ಪೂಜೆಯ ವೇಳೆ ಕೆಂಪು ಹೂ ಅರ್ಪಣೆ ಮಾಡಬೇಕು. ಹಾಗೆ ಕೆಂಪು ಬಟ್ಟೆಯನ್ನು ಧರಿಸಬೇಕು. ಹನುಮಂತನ ಪೂಜೆ ಮಾಡುವ ಜೊತೆಗೆ ಹನುಮಂತನ ಕಥೆಯನ್ನು ಓದಬೇಕು. ಹನುಮಂತನಿಗೆ ತೆಂಗಿನ ಕಾಯಿ, ಧೂಪದ್ರವ್ಯ, ದೀಪ, ಕುಂಕುಮಗಳನ್ನು ಅರ್ಪಿಸಿ. ನಿಯಮ ಬದ್ಧವಾಗಿ ಮಂಗಳವಾರದ ಪೂಜೆ ಮಾಡುವುದರಿಂದ ಬಂದ ಕಷ್ಟಗಳೆಲ್ಲ ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ.

 

ಮನೆಯಲ್ಲಿಯೇ ಮಾಡಿ ಬನಾನ- ಕೋಕನೆಟ್ ಬ್ರೆಡ್

0
0
banana bread 4556

ಇಂದು ಸಾಮಾನ್ಯವಾಗಿ ಎಲ್ಲರೂ ಬೇಕರಿ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಕೆಲವೊಂದು ತಿಂಡಿಗಳನ್ನು ಮನೆಯಲ್ಲಿಯೇ, ರುಚಿ ಶುಚಿಯಾಗಿ ಮಾಡಿಕೊಳ್ಳಬಹುದಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು:
ಮೈದಾ-ಒಂದು ಕಪ್, ಮೊಸರು-ಒಂದು ಕಪ್‍, ಅಡುಗೆ ಸೋಡಾ-3/4 ಚಮಚ, ನಿಂಬೆರಸ-1 ಚಮಚ, ಹಣ್ಣಾಗಿರುವ ಎರಡು ಪಚ್ಚಬಾಳೆ ಹಣ್ಣು, ಉಪ್ಪು-ಅರ್ಧ ಚಮಚ, ಸಕ್ಕರೆ- ಒಂದು ಕಪ್, ಎಣ್ಣೆ- ಅರ್ಧ ಕಪ್, ಮೊಟ್ಟೆ- ಮೂರು, ಹುರಿದ ತೆಂಗಿನ ತುರಿ-ಅರ್ಧ ಕಪ್, ವೆನಿಲ್ಲಾ ಎಸೆನ್ಸ್-ಅರ್ಧ ಚಮಚ

ತಯಾರಿಸುವ ವಿಧಾನ:
ಓವೆನ್ ಅನ್ನು 350 ಡಿಗ್ರಿ ಉಷ್ಣತೆಗೆ ಬಿಸಿ ಮಾಡಿ, ಎಣ್ಣೆ ಮತ್ತು ಬ್ರೆಡ್ ಪ್ಯಾನ್ ತೆಗೆದುಕೊಂಡು ಪಕ್ಕದಲ್ಲಿಡಿ. ದೊಡ್ಡ ಬಟ್ಟಲಿನಲ್ಲಿ ಮೈದಾ, ಅಡುಗೆ ಸೋಡಾ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಇನ್ನೊಂದು ಬಟ್ಟಲಿನಲ್ಲಿ ಸಕ್ಕರೆ, ಮೊಟ್ಟೆ, ವೆನಿಲ್ಲಾ, ಎಣ್ಣೆ, ಮೊಸರು, ನಿಂಬೆರಸ ಹಾಕಿ ಚೆನ್ನಾಗಿ ಕಲಸಿರಿ, ನಂತರ ಕಲಸಿದ ಮೈದಾವನ್ನು ನಿಧಾನವಾಗಿ ಹಾಕಿ ಮಿಕ್ಸ್ ಮಾಡಿ, ಬಳಿಕ ಎಣ್ಣೆ ಹಾಕಿಟ್ಟಿರುವ ತಟ್ಟೆಗೆ ಸುರಿಯಿರಿ, ಅದರ ಮೇಲೆ ತೆಂಗಿನ ತುರಿಯನ್ನು ಉದುರಿಸಿ, ಮೂವತ್ತು ನಿಮಿಷ ಇಟ್ಟು ಅಲ್ಯುಮಿನಿಯಂ ಕವರ್ ಅನ್ನು ಮುಚ್ಚಿ ಮತ್ತೆ ಅರ್ಧ ಗಂಟೆ ಬೇಯಿಸಿ, ಬಳಿಕ ನೈಫ್ ನಿಂದ ಬೆಂದಿದೆಯೇ ಎಂದು ಪರೀಕ್ಷಿಸಿ, ಬೆಂದ ನಂತರ ಮೈಕ್ರೋ ಓವೆನ್ ನಿಂದ ಹೊರತೆಗೆದು ಹತ್ತು ನಿಮಿಷ ಹಾಗೆಯೇ ಇಡಿ.

ಆನಂತರ ಅದನ್ನು ಕತ್ತರಿಸಿ. ಇಷ್ಟು ಮಾಡಿದರೆ ರುಚಿಕರವಾದ ಬ್ರೆಡ್ ರೆಡಿಯಾಗುತ್ತದೆ. ಇದನ್ನು ಒಂದು ದಿನ ಇಟ್ಟು ತಿಂದರೆ ಹೆಚ್ಚು ರುಚಿಕರವಾಗುತ್ತದೆ. ಪ್ಲಾಸ್ಟಿಕ್ ನಲ್ಲಿ ಹಾಕಿಟ್ಟರೆ ಈ ಬ್ರೆಡ್ ಅನ್ನು ಮೂರರಿಂದ ನಾಲ್ಕು ದಿನ ಕಾಲ ಇಡಬಹುದು.

ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಬಿಗ್ ಶಾಕ್…!

0
0

ಗೋವಾದ ಇಬ್ಬರು ಕಾಂಗ್ರೆಸ್ ಶಾಸಕರಾದ ದಯಾನಂದ್ ಸೊಪ್ಟೆ ಹಾಗೂ ಸುಭಾಷ್ ಶಿರೋಡ್ಕರ್ ಸೋಮವಾರ ಮಧ್ಯರಾತ್ರಿ ದೆಹಲಿಯತ್ತ ಹೋಗಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿದೆ.

ರಾಷ್ಟ್ರ ರಾಜಧಾನಿಯಲ್ಲಿ ಆ ಕಾಂಗ್ರೆಸ್ ಶಾಸಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹಿರಿಯ ಬಿಜೆಪಿ ನಾಯಕರು ಹೇಳಿದ್ದಾರೆ.

“ಮಂಗಳವಾರ ಅವರಿಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ” ಎಂದು ಅವರು ಹೇಳಿದ್ದಾರೆ.

2017ರ ಚುನಾವಣೆಯಲ್ಲಿ ಸೊಪ್ಟೆ ಅವರು ಮಾಂಡ್ರೆಮ್ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅವರನ್ನು ಸೋಲಿಸಿದ್ದರು. ಶಿರೋಡ್ಕರ್ ಅವರು ಶಿರೋಡಾ ಕ್ಷೇತ್ರದಿಂದ ಜಯ ಗಳಿಸಿದವರಾಗಿದ್ದಾರೆ. ಮಧ್ಯರಾತ್ರಿ ವಿಮಾನದಲ್ಲಿ ಸೊಪ್ಟೆ ಹಾಗೂ ಶಿರೋಡ್ಕರ್ ದೆಹಲಿ ವಿಮಾನ ಹತ್ತಿದ್ದರೆ, ಅವರಿಗಿಂತ ತುಸು ಮೊದಲು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ದೆಹಲಿಗೆ ತೆರಳಿದ್ದರು.

ನಾನು ಬ್ಯುಸಿನೆಟ್ ಟ್ರಿಪ್ ಹೋಗ್ತಾ ಇದ್ದೇನೆ ಎಂದು ಸೊಪ್ಟೆ ಹೇಳಿದ್ದರೆ, ನಾನು ಬಿಜೆಪಿ ಸೇರಿದರೆ ನಿಮಗೆ ಗೊತ್ತಾಗಲಿದೆ ಎಂದು ಶಿರೋಡ್ಕರ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ತಾನು ಸರ್ಕಾರ ರಚಿಸುವುದಾಗಿ ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ಅಹವಾಲು ಸಲ್ಲಿಸಿತ್ತು.

ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಅಪಾಯದ ಸಂಕೇತ…!

0
0

ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರಿಗೂ ಬಿಳಿ ಕೂದಲಿನ ಸಮಸ್ಯೆ ಶುರುವಾಗಿಬಿಟ್ಟಿದೆ. ಇದೆಲ್ಲಾ ಕಾಮನ್ ಅಂದ್ಕೊಂಡು ನೀವು ಸುಮ್ಮನಾಗಿಬಿಡಬೇಡಿ, ಯಾಕಂದ್ರೆ ಅವಧಿಗೂ ಮುನ್ನವೇ ಕೂದಲು ಬೆಳ್ಳಗಾದವರಿಗೆ ಹೃದಯದ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು.

ವೃದ್ಧಾಪ್ಯಕ್ಕೂ ಮೊದಲೇ ಕೂದಲು ಬೆಳ್ಳಗಾದ್ರೆ ಅದು ಹೃದಯದ ತೊಂದರೆ ಬಗೆಗಿನ ಎಚ್ಚರಿಕೆಯ ಕರೆಗಂಟೆ ಎನ್ನುತ್ತಾರೆ ಸಂಶೋಧಕರು. ಹಾನಿಗೊಳಗಾದ ಡಿಎನ್ಎ, ಆಕ್ಸಿಡೇಟಿವ್ ಒತ್ತಡ, ಉರಿಯೂತ, ಹಾರ್ಮೋನುಗಳಲ್ಲಿನ ವ್ಯತ್ಯಾಸ, ಜೀವಕೋಶಗಳಲ್ಲಿನ ಬದಲಾವಣೆ ಕೂಡ ಕೂದಲು ಬೆಳ್ಳಗಾಗುವ ಸಮಸ್ಯೆಗೆ ಕಾರಣ.

ಹೃದಯದ ತೊಂದರೆಗೆ ಕೂಡ ಇವೇ ಮೂಲ ಕಾರಣಗಳು. ಸ್ಪೇನ್ ನಲ್ಲಿ ಈ ಬಗ್ಗೆ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಹಾಗಾಗಿ ಆದಷ್ಟು ಒತ್ತಡದ ಬದುಕಿನಿಂದ ದೂರವಿರಿ. ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ.

ಖಿನ್ನತೆಯಿಂದ ಬಳಲುತ್ತಿರುವವರಿಗೆ ಮೊಸರೇ ಮದ್ದು!

0
0
yogurt

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ. ಪ್ರತಿಕ್ಷಣವೂ ಪೈಪೋಟಿ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಖಿನ್ನತೆ ಆವರಿಸಿಕೊಳ್ಳುತ್ತದೆ. ಕೇವಲ ಮೊಸರು ತಿನ್ನುವ ಮೂಲಕ ನೀವು ಖಿನ್ನತೆಯಿಂದ ಪಾರಾಗಬಹುದು. ಸಂಶೋಧನೆಯೊಂದರಲ್ಲಿ ಮೊಸರು ಖಿನ್ನತೆಗೆ ಮದ್ದು ಅನ್ನೋದು ದೃಢಪಟ್ಟಿದೆ.ಮೊಸರಿನಲ್ಲಿರುವ ಪ್ರೋ ಬ್ಯಾಕ್ಟೀರಿಯಾ ಲ್ಯಾಕ್ಟೋಬ್ಯಾಸಿಲ್ಲಸ್, ಖಿನ್ನತೆ ಮತ್ತು ಆತಂಕವನ್ನು ದೂರ ಮಾಡುತ್ತದೆ.

ಮೊಸರು ಸೇವನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಖಿನ್ನತೆಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಖಿನ್ನತೆಗೆ ಮೊಸರೇ ಮದ್ದು ಅನ್ನೋದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ. ಇಲಿಗಳ ಆಹಾರದಲ್ಲಿ ಲ್ಯಾಕ್ಟೋಬ್ಯಾಸಿಲ್ಲಸ್ ಪ್ರಮಾಣ ಕಡಿಮೆ ಮಾಡಿದಾಗ ಅವು ಖಿನ್ನತೆಗೆ ಒಳಗಾಗಿದ್ದವು. ಆಹಾರದಲ್ಲಿ ಪ್ರೋ ಬ್ಯಾಕ್ಟೀರಿಯಾ ಅಂಶವನ್ನು ಸೇರ್ಪಡೆ ಮಾಡಿದಾಗ ಸಹಜ ಸ್ಥಿತಿಗೆ ಮರಳಿದ್ದವು.

ಹೊಟ್ಟೆಯಲ್ಲಿರುವ ಲ್ಯಾಕ್ಟೋಬ್ಯಾಸಿಲ್ಲಸ್ ಪ್ರಮಾಣ ಮೆಟಾಬೊಲಿಕ್ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಖಿನ್ನತೆ ಆವರಿಸಿಕೊಳ್ಳುತ್ತದೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ಮೇಲೆ ನಿಮ್ಮ ಡಯಟ್ ನಲ್ಲಿ ಮೊಸರನ್ನೂ ಸೇರಿಸಿ. ಆದ್ರೆ ಮೊಸರನ್ನು ಯಾವ ಪ್ರಮಾಣದಲ್ಲಿ ಸೇವಿಸಿದ್ರೆ ಉತ್ತಮ ಅನ್ನೋ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.


ಸೆಕ್ಸ್ ಗಾಗಿ ನವ ವಿವಾಹಿತನಿಗೆ ಕಿರುಕುಳ ಕೊಟ್ಟ ಮಹಿಳೆ

0
0

ಪುರುಷರಿಂದ ಲೈಂಗಿಕ ಕಿರುಕುಳ ಅನುಭವಿಸಿ ಮೃತಪಟ್ಟ ಹೆಂಗಸರ ಬಗ್ಗೆ ಕೇಳಿದ್ದೀವಿ. ಆದರೆ ಇಲ್ಲಿ ಅದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಮದುವೆಯಾದ ಗಂಡಸಿನ ಬಳಿ ನಿರಂತರವಾಗಿ ಸೆಕ್ಸ್ ಮಾಡುವುದಕ್ಕೆ ಒತ್ತಾಯಿಸಿದ ಹಿನ್ನೆಲೆ ನೊಂದ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ.

ಮೃತ ವ್ಯಕ್ತಿಯ ಹೆಸರು ಸಚಿನ ಮಿಟ್ಕರಿ (38). ಮಹಾರಾಷ್ಟ್ರದ ಪರ್ಭಾನಿಯ ಆಸ್ಪತ್ರೆಯಲ್ಲಿ ಮಹಿಳೆ ಹಾಗೂ ಸಚಿನ್ ಇಬ್ಬರೂ ಕೆಲಸ ಮಾಡುತ್ತಿದ್ದರು. ಸಚಿನ್ ಗೆ ಮದುವೆಯಾಗಿರುವ ವಿಷಯ ಗೊತ್ತಿದ್ದರೂ ಸೆಕ್ಸ್ ಗಾಗಿ ಮಹಿಳೆ ನಿರಂತರವಾಗಿ ಒತ್ತಾಯಿಸುತ್ತಿದ್ದಳಂತೆ. ಒಪ್ಪದಿದ್ದರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆದರಿಕೆಯೊಡ್ಡಿದ್ದಳಂತೆ. ಇದರಿಂದ ಬೇಸತ್ತ ಸಚಿನ್ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ.

ಸಚಿನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹಾಗೂ ಮಹಿಳೆ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

‘ಮಿ ಟೂ’ಎನ್ನುತ್ತಾ ಕನ್ನಡ ನಟನತ್ತ ಬೊಟ್ಟು ಮಾಡಿದ ಆರ್‌ಜೆ ನೇತ್ರಾ

0
0

ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖರೆನಿಸಿಕೊಂಡ ಪುರುಷರಿಂದ ತಾವು ಲೈಂಗಿಕವಾಗಿ ಶೋಷಣೆಗೊಳಗಾದ ಕಥೆಗಳನ್ನು ಅನೇಕ ಮಹಿಳೆಯರು #MeToo ಹ್ಯಾಶ್‌ಟ್ಯಾಗ್‌ನ ಅಡಿಯಲ್ಲಿ ಬಿಚ್ಚಿಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನದ ಸದ್ದು ಜೋರಾಗಿದೆ. ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಮಿ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬೀಸಲು ಆರಂಭಿಸಿದೆ.

ಕನ್ನಡದ ಪ್ರಸಿದ್ಧ, ಪ್ರಶಸ್ತಿ ವಿಜೇತ ಆರ್‌ಜೆ ನೇತ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. 2011ರಲ್ಲಿ ನಡೆದ ಘಟನೆಯನ್ನು ಅವರದ್ದೇ ಶಬ್ದಗಳನ್ನು ನೋಡೋಣ.

ಅದು 2011ನೇ ವರ್ಷ. ಆ ಹುಡುಗಿ 7 ವರ್ಷ ಚಿಕ್ಕವಳು. ಬುದ್ಧಿವಂತಿಕೆಯೂ ಈಗಿನಷ್ಟಿರಲಿಲ್ಲ. ಅದು ಕ್ರಿಸ್‌ಮಸ್ ಸಂದರ್ಭ. ಸ್ನೇಹಿತರ ಜತೆಗೂಡಿ ನೈಟ್‌ ಕ್ಲಬ್‌ನಲ್ಲಿದ್ದಳು. ಸುಪ್ರಸಿದ್ಧ ನಟ ತನ್ನ ಸ್ನೇಹಿತರ ದೊಡ್ಡ ಗುಂಪಿನೊಂದಿಗೆ ಅಲ್ಲಿಗೆ ಬಂದ. ಆ ಹುಡುಗಿ ಮತ್ತು ನಟ ಪರಸ್ಪರ ಶುಭಾಶಯ ಕೋರಿದರು. ಹುಡುಗಿ ಎಂದಿನಂತೆ ತನ್ನಷ್ಟಕ್ಕೇ ಇದ್ದರೆ, ನಟ ತೀರಾ ಮಾತನಾಡುತ್ತಿದ್ದ.

ಹುಡುಗಿಯನ್ನು ಡ್ಯಾನ್ಸ್ ಫ್ಲೋರ್‌ಗೆ ನಟ ಕರೆದ. ತೀರಾ ಸನಿಹಕ್ಕೆ ಎಳೆದುಕೊಳ್ಳಲು ಯತ್ನಿಸಿದ. ಹುಡುಗಿಗೆ ಸಂಶಯದ ವಾಸನೆ ಬಡಿಯಿತು. ಆತನಿಂದ ಬಿಡಿಸಿಕೊಳ್ಳಲು ಹುಡುಗಿ ಪ್ರಯತ್ನಿಸಿದಾಗ ನಟ ಅಲ್ಲೇ ಇರುವಂತೆ ಬಲವಂತ ಮಾಡಿದ. ಈ ಸ್ಥಳ ಅನುಕೂಲಕರವಾಗಿಲ್ಲವಾದರೆ, ನನ್ನ ರೂಂಗೆ ಯಾವತ್ತೂ ಹೋಗಬಹುದು ಅಂದ. ಇದು ಲೈಂಗಿಕ ದೌರ್ಜನ್ಯವಾದರೆ ನನ್ನದೂ #ಮಿ ಟೂ ಅನುಭವ…

ಈ ರೀತಿ ಬರೆದುಕೊಂಡಿರುವ ಆರ್‌ಜೆ ನೇತ್ರಾ, 2 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ರೇಡಿಯೋದಲ್ಲಿ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ.

ಪೋಕ್ಮನ್ ಗೇಮ್ ಆಡಿದ್ರೆ ಹೆಚ್ಚುತ್ತಂತೆ ಆಯಸ್ಸು…!

0
0

PARIS, FRANCE - SEPTEMBER 08: Kids show the screen of their smartphone with Nintendo Co.'s Pokemon Go augmented-reality game at the Trocadero in front of the Eiffel tower on September 8, 2016 in Paris, France. The Pokemon GO game allows to hunt on their smartphone or tablet virtual creatures scattered in public spaces. Launched in July for the first time, Pokemon GO has surpassed the 500 million downloads bar. (Photo by Chesnot/Getty Images)ನಂಬಿದ್ರೆ ನಂಬಿ ಬಿಟ್ರೆ ಬಿಡಿ ರೆಗ್ಯುಲರ್ ಆಗಿ ಪೋಕ್ಮನ್ ಗೋ ಗೇಮ್ ಆಡಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತೆ. ಅಧ್ಯಯನವೊಂದರ ಪ್ರಕಾರ ಪೋಕ್ಮನ್ ಗೇಮ್ ಆಡಿದ್ರೆ ನಿಮ್ಮ ಆಯುಷ್ಯಕ್ಕೆ 41 ದಿನಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವಂತೆ.

ಲಾಂಚ್ ಆದಾಗಿನಿಂದ್ಲೂ ಈ ಗೇಮ್ ಭಾರೀ ಜನಪ್ರಿಯತೆ ಗಳಿಸಿದೆ. ಪೋಕ್ಮನ್ ಆಟ ಆಡಿದವರೆಲ್ಲ ನಿಜ ಜೀವನದಲ್ಲೂ ಅಂಥದ್ದೇ ಪಾತ್ರಗಳಿಗಾಗಿ ಹುಡುಕಾಡ್ತಾರೆ. ಅಪಾಯಕಾರಿ ಜಾಗಗಳಲ್ಲಿ ನಡೆದು ಜನರು ಗಾಯ ಮಾಡಿಕೊಂಡ ಉದಾಹರಣೆಗಳೂ ಇವೆ.

ಆದ್ರೆ ಆಟ ಜೀವಿತಾವಧಿ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಅಮೆರಿಕದ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ ಮತ್ತು ಮೈಕ್ರೊಸಾಫ್ಟ್ ಸಂಶೋಧನೆ ಪ್ರಕಾರ ಪೋಕ್ಮನ್ ಗೇಮ್ ಆಡುವವರು ಪ್ರತಿದಿನ 1473 ಹೆಜ್ಜೆ ಹೆಚ್ಚು ನಡೆಯುತ್ತಾರಂತೆ. ಅಂದ್ರೆ ಶೇ.25ರಷ್ಟು ಅಧಿಕ ಚಟುವಟಿಕೆಯಿಂದಿರ್ತಾರೆ.

15-49 ವರ್ಷ ವಯಸ್ಸಿನವರು ಪ್ರತಿದಿನ 1000 ಹೆಜ್ಜೆ ನಡೆದ್ರೆ ಅವರ ಆಯುಷ್ಯಕ್ಕೆ 41 ದಿನ ಸೇರ್ಪಡೆಯಾಗುತ್ತದೆ. 32,000 ಪೋಕ್ಮನ್ ಗೋ ಗೇಮ್ ಬಳಕೆದಾರರ ಬಗ್ಗೆ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಹೆಚ್ಚು ತೂಕವಿರುವವರು ಮತ್ತು ಕಡಿಮೆ ಚಟುವಟಿಕೆಯಿಂದಿರುವವರಿಗೆ ಆರೋಗ್ಯ ಕಾಪಾಡಿಕೊಳ್ಳಲು ಪೋಕ್ಮನ್ ಗೇಮ್ ಬೆಸ್ಟ್ ಉಪಾಯ.

ಆಪ್ತ ಸಹಾಯಕನ ಕೈಯಿಂದ ಕಾಲಿಗೆ ಚಪ್ಪಲಿ ತೊಡಿಸಿಕೊಂಡ ಸಚಿವರಿಂದ ಸ್ಪಷ್ಟನೆ

0
0

ಚಾಮರಾಜನಗರ: ಸಚಿವ ಸಿ. ಪುಟ್ಟರಂಗ ಶೆಟ್ಟಿ ತಮ್ಮ ಆಪ್ತ ಸಹಾಯಕ ಕೈಯಿಂದ ಕಾಲಿಗೆ ಚಪ್ಪಲಿ ತೊಡಿಸಿಕೊಂಡು ಈಗ ಅದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಬಂದ ಸಚಿವ ಸಿ. ಪುಟ್ಟರಂಗ ಶೆಟ್ಟಿ ತಮ್ಮ ಚಪ್ಪಲಿಯನ್ನು ಬಿಟ್ಟು ಎತ್ತಿನ ಗಾಡಿಯನ್ನು ಚಾಲನೆ ಮಾಡಿದ್ದರು.

ನಂತರ ಅವರು ಕೆಳಗಿಳಿದು ಬರುತ್ತಿದ್ದಂತೆ ಆಪ್ತ ಸಹಾಯಕ ಓಡಿ ಬಂದು ಚಪ್ಪಲಿ ತೊಡಿಸಿದ ಘಟನೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು. ಆದರೆ ಇದರ ಬಗ್ಗೆ ಪುಟ್ಟರಂಗಶೆಟ್ಟಿ ಮಾತ್ರ ಬೇರೆಯದ್ದೇ ಮಾತು ಹೇಳಿದ್ದಾರೆ. ಸಹಾಯಕ ತನ್ನ ಬಳಿ ಚಪ್ಪಲಿ ತಂದಾಗ ನಾನು ಹಾಗೆಲ್ಲ ತರಬಾರದು ಎಂದು ಹೇಳಿದ್ದೆ. ಆತನನ್ನು ಮುಟ್ಟಿ ನಾನು ನಮಸ್ಕರಿಸಿ ಚಪ್ಪಲಿ ನಾನೇ ಹಾಕಿಕೊಂಡಿದ್ದೆ. ಮಾಧ್ಯಮದಲ್ಲಿ ಬಂದ ವರದಿಯಿಂದ ನನಗೆ ನೋವಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಕ್ಯಾಮೆರಾ ಕಣ್ಣಿನಲ್ಲಿ ಮಾತ್ರ ಪುಟ್ಟರಂಗ ಶೆಟ್ಟಿಗೆ ಆಪ್ತ ಸಹಾಯಕ ಚಪ್ಪಲಿ ತೊಡಿಸಿದ ದಶ್ಯ ಸೆರೆಯಾಗಿದೆ. ಕ್ಯಾಮೆರಾ ಕಣ್ಣು ಸುಳ್ಳು ಹೇಳುತ್ತೋ ಅಥವಾ ಪುಟ್ಟರಂಗ ಶೆಟ್ಟಿ ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ!

ಪಶ್ಚಿಮ ಬಂಗಾಳವನ್ನು ಬೆಚ್ಚಿ ಬೀಳಿಸಿದೆ ಕೇಂದ್ರ ಗುಪ್ತಚರ ಇಲಾಖೆ ವರದಿ

0
0

ನವರಾತ್ರಿ ಸಂಭ್ರಮದಲ್ಲಿರುವ ಸಮಸ್ತ ಪಶ್ಚಿಮ ಬಂಗಾಳ ಜನತೆ, ಇದೀಗ ಕೇಂದ್ರ ಭದ್ರತಾ ಸಂಸ್ಥೆ ರಾಜ್ಯ ಸರ್ಕಾರಕ್ಕೆ ನೀಡಿರುವ ವರದಿಯಿಂದಾಗಿ ಅಕ್ಷರಶಃ ಬೆಚ್ಚಿಬಿದ್ದಿದೆ.

ಕಾರಣ ಬಾಂಗ್ಲಾದ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಯುದ್ದೀನ್ ಬಾಂಗ್ಲಾದೇಶ್ ದುರ್ಗಾಪೂಜೆ ಉತ್ಸವಗಳಲ್ಲಿ ಬಾಂಬ್ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಪಡೆ ತಿಳಿಸಿದೆ.

ಉತ್ತರ ಬಂಗಾಳದ ಜಲ್ಪೈಗುರಿ, ಕೂಚ್ಬೆಹಾರ್, ಅಲಿಪುರ್ಧರ್ ಮತ್ತು ಸಿಲಿಗುರಿಗಳಲ್ಲಿ ದಾಳಿ ನಡೆಯುವ ಸಾಧ್ಯತೆಗಳಿದ್ದು ಇದಕ್ಕೆ ಉಗ್ರ ಸಂಘಟನೆಗೆ ಸೇರಿದ ನಾಲ್ವರು ಉಗ್ರರು ತಯಾರಿಯನ್ನು ನಡೆಸುತ್ತಿದ್ದಾರೆ.

ಅವರಲ್ಲಿಬ್ಬರು ಈಗಾಗಲೇ ಭಾರತವನ್ನು ಪ್ರವೇಶಿಸಿದ್ದು, ಕೂಚ್ಬೇಹರ್ ವಲಯದಲ್ಲಿರುವ ದಿನ್ಹಟ್ಟಾದಲ್ಲಿ ಠಿಕಾಣಿ ಹೂಡಿದ್ದಾರೆ. ಉಳಿದಿಬ್ಬರು ಇನ್ನೆರಡು ದಿನಗಳಲ್ಲಿ ರಾಜ್ಯ ಪ್ರವೇಶಿಸುವ ಸಾಧ್ಯತೆಗಳಿವೆ.

ಉಗ್ರರು ನೇಪಾಳದಿಂದ ತರಿಸಿಕೊಂಡ ಸ್ಪೋಟಕಗಳನ್ನು ಬಳಸುವ ಸಾಧ್ಯತೆಗಳಿದ್ದು ದುರ್ಗಾ ಪೂಜೆಯ ವೇಳೆ ಗರಿಷ್ಠ ರಕ್ತಪಾತ ಮಾಡಲು ಅವರು ಯೋಜನೆ ರೂಪಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಾಕ್ ಹೊಡೆದರೆ ಯಡಿಯೂರಪ್ಪಗೆ ಹೊಡಿಬೇಕು ನಮಗೇನಲ್ಲ: ಸಿದ್ದರಾಮಯ್ಯ

0
0

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಮಧ್ಯಾಹ್ನ ಕಾಂಗ್ರೆಸ್ ಗೆ ಶಾಕ್ ಕಾದಿದೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಕ್ ಹೊಡೆದರೆ ಯಡಿಯೂರಪ್ಪಗೆ ಹೊಡಿಬೇಕು ನಮಗೇನಲ್ಲ ಎಂದು ಹೇಳಿದ್ದಾರೆ.

ಜಮಖಂಡಿಗೆ ಭೇಟಿ ನೀಡಿದ ವೇಳೆ ಸಿದ್ದರಾಮಯ್ಯ ಯಡಿಯೂರಪ್ಪ ಅವರ ಶಾಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ….ಯಡಿಯೂರಪ್ಪ ಎಷ್ಟು ಸಲ ಶಾಕ್ ಕೊಟ್ಟರು, ಸರ್ಕಾರ ಬೀಳುತ್ತದೆ ಎಂದು ಎಷ್ಟು ಸಲ ಹೇಳಿದರು? ಏನಾದರೂ ಆಯಿತೇ,” ಎಂದು ಪ್ರಶ್ನೆ ಮಾಡಿದರು. ಯಡಿಯೂರಪ್ಪ ಸುಳ್ಳು ಹೇಳುತ್ತಾರೆ. ಯಡಿಯೂರಪ್ಪ ಅವರ ಮಾತಿಗೆ ಕಿಮ್ಮತ್ತೇ ಇಲ್ಲ,”ಎಂದರು.

ಬಿಜೆಪಿ ಟಿಪ್ಪು ಜಯಂತಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬ ವರದಿಯ ಕುರಿತು ಮಾತನಾಡಿದ ಅವರು ಟಿಪ್ಪು ಜಯಂತಿಯನ್ನು ಈಗಾಗಲೇ ಮೂರ್ನಾಲ್ಕು ಬಾರಿ ಮಾಡಿದ್ದಾಗಿದೆ. ಈಗ ಅದರ ಬಗ್ಗೆ ವಿವಾದ ಎಬ್ಬಿಸುವಂಥದ್ದು ಏನೂ ಇಲ್ಲ,” ಎಂದು ಹೇಳಿದರು.

ಅವಮಾನದಿಂದ ನೊಂದ ಕಬಡ್ಡಿ ಕೋಚ್ ನೇಣಿಗೆ ಶರಣು

0
0

ಮಹಿಳಾ ಕಬಡ್ಡಿ ಕೋಚ್ ರುದ್ರಪ್ಪ ವಿ ಹೊಸಮನಿ ಅವರು ಹರಿಹರ ನಗರದ ಎಸ್.ಎಂ. ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

ಬೆಂಗಳೂರಿನ ಸಾಯಿ ಕೇಂದ್ರದಲ್ಲಿ ಮಹಿಳಾ ಕಬಡ್ಡಿ ಆಟಗಾರ್ತಿಯರಿಗೆ ಕೋಚ್ ಆಗಿದ್ದ ರುದ್ರಪ್ಪ ಹೊಸಮನಿ ಅವರು ಆಟಗಾರ್ತಿಯರು ಬಟ್ಟೆ ಬದಲಿಸುವಾಗ ಇಣುಕಿ ನೋಡಿದರು ಎಂಬ ಆರೋಪ ಎದುರಿಸುತ್ತಿದ್ದರು. ಹೀಗಾಗಿ ಅವರನ್ನು ಅಮಾನತು ಮಾಡಿ ದೆಹಲಿ ಕಚೇರಿಗೆ ವರ್ಗಾಯಿಸಿದ್ದರು. ಅವಮಾನದಿಂದ ಬೇಸತ್ತ ರುದ್ರಪ್ಪ ಅವರು ಮನೆಯವರ ಬಳಿ ದೆಹಲಿಗೆ ಹೋಗುತ್ತೇನೆ ಎಂದು ಹೇಳಿ ಹರಿಹರದ ಲಾಡ್ಜ್ ವೊಂದಕ್ಕೆ ಹೋಗಿ ನೇಣು ಹಾಕಿಕೊಂಡಿದ್ದಾರೆ.

ಸಾಯುವ ಮೊದಲು ಬರೆದ ಡೆತ್ ನೋಟ್ ನಲ್ಲಿ ಹೆಂಡತಿ ಹಾಗೂ ಮಗನ ಬಳಿ ಕ್ಷಮೆ ಕೋರಿದ್ದಾರೆ ರುದ್ರಪ್ಪ. ಅಲ್ಲದೇ ತಮ್ಮ ದೇಹವನ್ನು ಆಸ್ಪತ್ರೆಗೆ ದಾನ ಮಾಡುವಂತೆ ಕೂಡ ಬರೆದಿದ್ದಾರೆ.


ಮದುವೆಯಾಗಲಿದ್ದಾರಂತೆ ನಟಿ ನೇಹಾ ಪಾಟೀಲ್

0
0

ಸ್ಯಾಂಡಲ್ವುಡ್ ನಟಿ ನೇಹಾ ಪಾಟೀಲ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ 19ರಂದು ನೇಹಾ ಎಂಜಿನಿಯರ್ ಪ್ರಣವ್ ಜತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ಹುಬ್ಬಳ್ಳಿ ಮೂಲದ ಈ ಬೆಡಗಿ ಸಂಯುಕ್ತ, ಸಿತಾರಾ, ವರ್ಧನ, ಇತ್ಯಾದಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಈ ವರ್ಷ ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಫೆಬ್ರವರಿಯಲ್ಲಿ ಮದುವೆ ಮಾಡಿಕೊಳ್ಳಲಿದ್ದಾರಂತೆ ನೇಹಾ.

ನಟಿ ನೇಹಾ ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೇ, ಕಿರುತೆರೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಜತೆಗೆ ಇವರು ಒಳ್ಳೆಯ ಡಾನ್ಸರ್ ಕೂಡ ಹೌದು. ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದಾರೆ. ಮದುವೆಯ ನಂತರವೂ ಅಭಿನಯಿಸಲು ನೇಹಾಗೆ ಭಾವಿ ಪತಿಯ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ.

ನಾಲೆಗೆ ಬಿದ್ದ ಬಸ್; 6 ಮಂದಿ ಸಾವು, 20 ಮಂದಿಗೆ ಗಾಯ

0
0

ಕೋಲ್ಕತ್ತಾದ ಗಡಿ ಬಳಿ ಬರುತ್ತಿದ್ದ ಬಸ್ ಗೋಜರ್ ಮೋರ್ ಬಳಿಯ ದಾಕತೀಯ ನಾಲೆಗೆ ಕಟ್ಟಿರುವ ಸೇತುವೆಯ ತಡೆಗೋಡೆಗೆ ಗುದ್ದಿ ನಾಲೆಯೊಳಗೆ ಬಿದ್ದಿದೆ.

ಈ ಘಟನೆ ಹೂಗ್ಲಿ ಜಿಲ್ಲೆಯ ಹರಿಪಾಲ್ನಲ್ಲಿ ನಡೆದಿದೆ. ಆರು ಮಂದಿ ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಹರಿಪಾಲ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ರಾಜ್ಯ ವಿಪತ್ತು ನಿರ್ವಹಣ ತಂಡವನ್ನು ಕೂಡ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಕೇಶ್ ಜೈನ್ ಹೇಳಿದ್ದಾರೆ.

ಸುಖ ದಾಂಪತ್ಯಕ್ಕೆ ಮಲಗುವ ಕೋಣೆ ಹೀಗಿರಲಿ

0
0
2016_11image_14_45_348915499husbandwife-ll

ಫೆಂಗ್ ಶೂಯಿ ಸಲಹೆಗಳು ತುಂಬಾ ಸರಳವಾಗಿರುವುದರಿಂದ ಇತರ ದೇಶ ಸೇರಿದಂತೆ ಭಾರತದಲ್ಲಿ ಇದನ್ನು ಅನುಸರಿಸುತ್ತಾರೆ. ಫೆಂಗ್ ಎಂದ್ರೆ ಗಾಳಿ, ಶೂಯಿ ಎಂದ್ರೆ ನೀರು ಎಂದರ್ಥ. ಜೀವನದಲ್ಲಿ ಸುಖ- ಶಾಂತಿ ಪಡೆಯಲು ಫೆಂಗ್ ಶೂಯಿಯಲ್ಲಿ ಸಾಕಷ್ಟು ಉಪಾಯಗಳನ್ನು ಹೇಳಲಾಗಿದೆ. ದಾಂಪತ್ಯ ಗಟ್ಟಿಯಾಗಲು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನೂ ಇದರಲ್ಲಿ ಹೇಳಲಾಗಿದೆ.

ಫೆಂಗ್ ಶೂಯಿ ಪ್ರಕಾರ ಬೆಡ್ ರೂಂ ನ ಕಿಟಕಿ ಪಕ್ಕದಲ್ಲಿ ಹಾಸಿಗೆಯನ್ನು ಹಾಕಬಾರದು. ಕಿಟಕಿ ಪಕ್ಕದಲ್ಲಿ ದಂಪತಿ ಒಂದಾಗಬಾರದು. ಹಾಸಿಗೆ ಹಾಕುವುದು ಅನಿವಾರ್ಯವಾದಲ್ಲಿ ಕಿಟಕಿ ಬಾಗಿಲುಗಳು ಮುಚ್ಚಿರಬೇಕು. ಹಾಗೆ ಪರದೆಯಿಂದ ಮುಚ್ಚಿರಬೇಕು.

ಹರಿದಿರುವ ಹಾಗೆ ಸಣ್ಣ ಸಣ್ಣ ರಂಧ್ರಗಳಿರುವ ಚಾದರವನ್ನು ಬಳಸಬಾರದು. ಜಗಳ, ಹೋರಾಟ, ಯುದ್ಧದ ಚಿತ್ರಗಳಿರುವ ಬೆಡ್ ಶೀಟ್ ಬಳಸಬಾರದು.

ಹಾಸಿಗೆಯ ಕೆಳಗೆ ಯಾವುದೇ ವಸ್ತುಗಳನ್ನು ಇಡಬಾರದು. ಹಾಸಿಗೆ ಕೆಳಗೆ ವಸ್ತುಗಳನ್ನಿಟ್ಟರೆ ಪತಿ- ಪತ್ನಿ ನಡುವೆ ಒತ್ತಡ ಜಾಸ್ತಿಯಾಗುತ್ತದೆ.

ಮಲಗುವ ಕೋಣೆಯಲ್ಲಿ ಟಿವಿ, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬಾರದು. ಇದರಿಂದ ಬರುವ ಅಲೆಗಳು ಕೋಣೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತವೆ.

ತಿಳಿ ಬಣ್ಣ ಶಾಂತಿ ಹಾಗೂ ಪ್ರೀತಿಯನ್ನು ಹೆಚ್ಚಿಸುತ್ತದೆ. ಬೆಡ್ ರೂಂನಲ್ಲಿ ತಿಳಿ ಬಣ್ಣ ಬಳಿಯಿರಿ. ಯಾವ ಕಾರಣಕ್ಕೂ ಡಾರ್ಕ್ ಹಾಗೂ ಕಪ್ಪು ಬಣ್ಣವನ್ನು ಹಚ್ಚಬೇಡಿ.

ಹೆತ್ತವರನ್ನು ಆತಂಕಗೊಳ್ಳುವಂತೆ ಮಾಡುತ್ತದೆ ಮಕ್ಕಳು ಮಾಡೋ ಈ ಕೆಲಸ

0
0

ಇದು ಇಂಟರ್ನೆಟ್ ದುನಿಯಾ, ಚಿಕ್ಕ ಚಿಕ್ಕ ಮಕ್ಕಳಿಗೂ ಈಗ ಮೊಬೈಲ್, ಕಂಪ್ಯೂಟರ್ ಬೇಕು. ಸಾಮಾಜಿಕ ಜಾಲತಾಣಗಳಿಗೂ ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಅಪರಿಚಿತರ ಜೊತೆ ದೋಸ್ತಿ, ಚಾಟಿಂಗ್ ಇವೆಲ್ಲಾ ಮಾಮೂಲಾಗಿಬಿಟ್ಟಿದೆ. ಇದರಿಂದ ಹೆತ್ತವರಿಗೆ ಮಾತ್ರ ತಲೆನೋವು ತಪ್ಪಿದ್ದಲ್ಲ.

ಶೇ.49 ರಷ್ಟು ಪೋಷಕರು, ಮಕ್ಕಳು ಸೈಬರ್ ಅಪರಾಧಕ್ಕೆ ಸಂಬಂಧಪಟ್ಟ ಚಾಟ್ ಮಾಡ್ತಾರೆ ಅಂತಾ ಆತಂಕಗೊಂಡಿದ್ದಾರಂತೆ. ಹೊಸ ಸಂಶೋಧನೆಯೊಂದರಲ್ಲಿ ಈ ಅಂಶ ಬಯಲಾಗಿದೆ. ಮಕ್ಕಳು ಹಾದಿ ತಪ್ಪಬಹುದು ಅನ್ನೋ ಸುಳಿವು ಸಿಕ್ಕಿದ ಮೇಲೆ ಶೇ.36 ರಷ್ಟು ಪೋಷಕರು, ತಮ್ಮ ಮಕ್ಕಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಅಮೆರಿಕದಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಈ ಅಂಕಿ-ಅಂಶಗಳು ದೊರೆತಿವೆ. ಶೇ.93ರಷ್ಟು ತಂದೆ-ತಾಯಂದಿರು ಸೈಬರ್ ಅಪರಾಧಗಳಿಂದ ಇರುವ ಆತಂಕದ ಬಗ್ಗೆ ಮಕ್ಕಳ ಜೊತೆ ಚರ್ಚಿಸುತ್ತಾರಂತೆ. ತಂತ್ರಜ್ಞಾನ ಬಳಕೆ ಆಧುನಿಕ ಜಗತ್ತಿನಲ್ಲಿ ಅತ್ಯವಶ್ಯಕ. ಆದ್ರೆ ಮಕ್ಕಳು ಅದನ್ನು ಸದ್ಭಳಕೆ ಮಾಡಿಕೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ.

ದುಬೈನಿಂದ ಮರಳಿ ಬಂದವನಿಗೆ ಪತ್ನಿ ನೀಡಿದ್ದಳು ಶಾಕ್

0
0

ಹೆಂಡತಿ ಬೇರೊಬ್ಬನ ಜೊತೆ ಪರಾರಿಯಾಗಿದ್ದಕ್ಕೆ ಬೇಸತ್ತವನೊಬ್ಬ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ ಈಗ ಜೈಲು ಪಾಲಾಗಿದ್ದಾನೆ. ನಿಷೇಧಿತ ಸಂಘಟನೆಯಾಗಿರುವ ಸಿಪಿಐಎಂಎಲ್ ಜೊತೆ ಗುರುತಿಸಿಕೊಂಡಿರುವ ತೆಲಂಗಾಣದ ಚಿನ್ನಲಿಗ್ನಾಪುರದ 38 ವರ್ಷದ ಜಕ್ಕುಲ ಬಾಬು ಎಂಬಾತನನ್ನು ಪೊಲೀಸರು ಅಕ್ಟೋಬರ್ 6ರಂದು ಬಂಧಿಸಿದ್ದಾರೆ.

ಜಕ್ಕುಲ ಬಾಬು ದುಬೈನಲ್ಲಿ ನಿರ್ಮಾಣ ಕೆಲಸದಲ್ಲಿ ಕಾರ್ಮಿಕನಾಗಿ ತೊಡಗಿಸಿಕೊಂಡಿದ್ದ. ಅಲ್ಲಿ ತಾನು ದುಡಿದ ಹಣದಲ್ಲಿ ಉಳಿಸಿ ಪ್ರತಿ ತಿಂಗಳು ಹೆಂಡತಿಗೆ ಕಳುಹಿಸುತ್ತಿದ್ದ. ಹೀಗೆ ದುಬೈನಲ್ಲಿ ದುಡಿದು ಹೆಂಡತಿಗೆ ಸಂಪಾದನೆಯನ್ನು ಕಳುಹಿಸುತ್ತಿದ್ದ ಆತ ಊರಿಗೆ ಬಂದಾಗ ಹೆಂಡತಿ ಬೇರೋಬ್ಬನ ಜೊತೆ ಓಡಿಹೋಗಿದ್ದಳು. ಇದರಿಂದ ಆಘಾತಗೊಂಡು ಬೇಸತ್ತ ಜಕ್ಕುಲ ಬಾಬು ನಿಷೇಧಿತ ಸಂಘಟನೆ ಜೊತೆ ಸೇರಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಸಿರ್ಸಿಲ್ಲ ಜಿಲ್ಲಾ ಎಸ್‍ಪಿ ರಾಹುಲ್ ತಿಳಿಸಿದ್ದಾರೆ.

ಓಡಿ ಹೋದ ಹೆಂಡತಿಯ ಪತ್ತೆಗೆ ಆತ ಹೀಗಾಗಿದ್ದಾನೆ ಎನ್ನಲಾಗಿದ್ದು, ಬಂಧಿತನಿಂದ ಅಮೆರಿಕ ನಿರ್ಮಿತ ಪಿಸ್ತೂಲ್, 44,600 ರೂ. ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Viewing all 89094 articles
Browse latest View live




Latest Images